ಮಂಗಳೂರು : ಗಾನ ನೃತ್ಯ ಅಕಾಡೆಮಿ (ರಿ.) ಮಂಗಳೂರು ಪ್ರಸ್ತುತ ಪಡಿಸುವ ‘ಪ್ರೇರಣಾ -4’ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆಯಿಂದ ಭರತನಾಟ್ಯ ಕಾರ್ಯಕ್ರಮವನ್ನು ದಿನಾಂಕ 29 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಸೇಂಟ್ ಅಲೋಶಿಯಸ್ ಕಾಲೇಜಿನ ಎಲ್.ಸಿ.ಆರ್.ಐ. ಹಾಲಿನಲ್ಲಿ ಆಯೋಜಿಸಲಾಗಿದೆ.
ಸುರತ್ಕಲ್ಲಿನ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ವಿದ್ವಾನ್ ಚಂದ್ರಶೇಖರ ನಾವಡ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕುಮಾರಿಯರಾದ ಮೈತ್ರೀಯಿ ನಾವಡ, ದಿಶಾ ಗಿರೀಶ್ ಮತ್ತು ತ್ವಿಷಾ ಶೆಟ್ಟಿ ಇವರ ನೃತ್ಯ ಕಾರ್ಯಕ್ರಮಕ್ಕೆ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರು ನಿರ್ದೇಶನ ಮತ್ತು ಹಾಡುಗಾರಿಕೆ, ಅನಂತ ಕೃಷ್ಣ ಸಿ.ವಿ. ನಟುವಾಂಗ, ಉಡುಪಿಯ ವಿದ್ವಾನ್ ಬಾಲಚಂದ್ರ ಭಾಗವತ್ ಮೃದಂಗ ಹಾಗೂ ಬೆಂಗಳೂರಿನ ವಿದ್ವಾನ್ ನಿತೀಶ್ ಅಮ್ಮಣ್ಣಾಯ ಕೊಳಲಿನಲ್ಲಿ ಸಾಥ್ ನೀಡಲಿದ್ದಾರೆ.