ಬೆಂಗಳೂರು : ಕರ್ನಾಟಕ ಲಲಿತಕಲಾ ಅಕಾಡೆಮಿಯ 60 ವರ್ಷದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಚಿತ್ರ ಕಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಮುಖಾಂತರ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಕರ್ನಾಟಕದ ಕಲಾ ಶಾಲೆಗಳಲ್ಲಿ ಯಾವುದೇ ಹಂತದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಪೂರ್ವ ಸಿದ್ಧತೆಗಾಗಿ ತಮಗೆ ದಿನಾಂಕ 30 ಏಪ್ರಿಲ್ 2025ರವರೆಗೆ ಕಾಲಾವಕಾಶವನ್ನು ನೀಡಲಾಗುವುದು. ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು ತಾವು ರಚಿಸಿರುವ ಕಲಾಕೃತಿಗಳ 2 ಛಾಯಾಚಿತ್ರಗಳನ್ನು ಹಾಗೂ ತಾವು ಅಭ್ಯಾಸ ಮಾಡುತ್ತಿರುವ ಚಿತ್ರ ಕಲಾ ಶಾಲೆಯ ಪ್ರಾಂಶುಪಾಲರಿಂದ ದೃಢೀಕರಣ ಪತ್ರದೊಂದಿಗೆ ಅರ್ಜಿ ಕಳುಹಿಸಿ ಕೊಡಲು ಕೋರಿದೆ. ಅರ್ಜಿಗಳನ್ನು ಗೂಗಲ್ ಭಾರ್ಮ್ ನಲ್ಲಿ ಭರ್ತಿಮಾಡಿ ಅಕಾಡೆಮಿ ಕೋರಿರುವ ಅಗತ್ಯ ದಾಖಲೆಗಳನ್ನು ಅನ್‌ಲೈನ್ ಮುಖಾಂತರ ಗೂಗಲ್‌ನಲ್ಲಿ ಲಗತ್ತಿಸುವುದು. (ವೆಬ್‌ಸೈಟ್: www.lalitkala.karnataka.gov.in) ಹೆಚ್ಚಿನ ವಿವರಗಳಿಗಾಗಿ ದೂ: 08022480297
ಆಯ್ಕೆಯ ಪ್ರಕ್ತಿಯೆ ಹೀಗಿರುತ್ತದೆ.
ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸುಂದರ ಪ್ರಕೃತಿಯು ಮಡಿಲಲ್ಲಿ ಚಿತ್ರ ಕಲಾ ಶಿಬಿರವನ್ನು ಏರ್ಪಡಿಸಲಾಗುವುದು. ಶಿಬಿರದಲ್ಲಿ ಅತ್ಯುತ್ತಮ ಚಿತ್ರ ರಚಿಸಿದ ವಿದ್ಯಾರ್ಥಿಗಳಿಗೆ (ಕನಿಷ್ಠ 6, ಗರಿಷ್ಠ 10 ವಿದ್ಯಾರ್ಥಿಗಳಿಗೆ) ರೂ.15,000/-ಗಳ ನಗದಿನೊಂದಿಗೆ ಸ್ಮರಣಿಕೆ, ಪ್ರಮಾಣ ಪತ್ರವನ್ನು ಬಹುಮಾನವಾಗಿ ನೀಡಲಾಗುವುದು, ಜೊತೆಗೆ 2025ರ ‘ಉತ್ತಮ ಕಲಾ ವಿದ್ಯಾರ್ಥಿ’ಯೆಂಬ ಗೌರವವನ್ನು ನೀಡಲಾಗುವುದು. ತಮ್ಮ ಕ್ರಿಯಾಶೀಲತೆಯನ್ನು ಮತ್ತಷ್ಟು ವಿಸ್ತರಿಸುವ ಈ ಸ್ಪರ್ಧೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಕೋರುತ್ತೇವೆ.