ಹೊಸದುರ್ಗ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಆಯೋಜಿಸುವ ಹೊಸದುರ್ಗ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನ ದತ್ತಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವು ದಿನಾಂಕ 30 ಮಾರ್ಚ್ 2025ರ ಆದಿತ್ಯವಾರ ಅಪರಾಹ್ನ ಘಂಟೆ 2.30ಕ್ಕೆ ಹೊಸದುರ್ಗದ ‘ಧ್ವನಿ’ ಸಾರ್ವಜನಿಕ ಗ್ರಂಥಾಲಯ ಕೀಕಾನ ಇಲ್ಲಿ ನಡೆಯಲಿದೆ.
ಕ. ಸಾ. ಪ. ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ಕನ್ನಡಕ್ಕೆ ಹೊಸಮರ್ಗದ ಕೊಡುಗೆ’ ಎಂಬ ವಿಷಯದಲ್ಲಿ ನಿವೃತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ಶ್ರೀ ನಂದಿಕೇಶನ್ ಎನ್. ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಸಿ. ಸುಬ್ರಾಯ, ಬೇಕಲ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀ ಅರವಿಂದ ಕೆ., ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀ ರಾಜಗೋಪಾಲ ಕೆ. ಹಾಗೂ ಕನ್ನಡ ಸಂಘ ಹೊಸದುರ್ಗ ಇದರ ಅಧ್ಯಕ್ಷರಾದ ಶ್ರೀ ಹೆಚ್. ಎಸ್. ಭಟ್ ಭಾಗವಹಿಸಲಿದ್ದಾರೆ.
ಕ.ಸಾ.ಪ. ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿಯಾದ ಶ್ರೀ ವಿಶಾಲಾಕ್ಷಿ ಪುತ್ರಕಳ ಕಾರ್ಯಕ್ರಮ ನಿರ್ವಹಿಸಲಿದ್ದು, ಎಮ್. ಎ. ಯು. ಪಿ. ಶಾಲೆ ಕಲ್ಲಕಟ್ಟ ಇಲ್ಲಿನ ಅಧ್ಯಾಪಿಕೆಯಾದ ಶ್ರೀಮತಿ ನಿರೀಕ್ಷಾ ಧನ್ಯವಾದ ಸಮರ್ಪಿಸಲಿದ್ದಾರೆ.