Subscribe to Updates

    Get the latest creative news from FooBar about art, design and business.

    What's Hot

    ಕಾಸರಗೋಡಿನ ಕನ್ನಡ ಭವನದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಜನ್ಮದಿನೋತ್ಸವ

    June 9, 2025

    ಶಿವಗಂಗೆಯ ಆದಿಮದಲ್ಲಿ ‘ಹುಣ್ಣಿಮೆ ಹಾಡು 218’ | ಜೂನ್ 11

    June 9, 2025

    ತೆಂಕುತಿಟ್ಟಿನ ಪ್ರಸಿದ್ಧ ಹಿರಿಯ ಹಾಸ್ಯಗಾರ ಪದ್ಮನಾಭ ಶೆಟ್ಟಿಗಾರ್‌ ನಿಧನ

    June 9, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನಿಂದ ‘ಬಿಸು ಪರ್ಬೊ’ ಹಾಗೂ ‘ಬಿಸು ಮಿನದನ’
    Cultural

    ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನಿಂದ ‘ಬಿಸು ಪರ್ಬೊ’ ಹಾಗೂ ‘ಬಿಸು ಮಿನದನ’

    April 2, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು: ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕ ಡಾ. ಎ. ಸದಾನಂದ ಶೆಟ್ಟಿ ಇವರ ನೇತೃತ್ವದಲ್ಲಿ ವರ್ಷಪ್ರತಿ ಜರಗುವ ತುಳುವರ ಸೌರಮಾನ ಯುಗಾದಿ ‘ಬಿಸು ಪರ್ಬೊ’ ಸಂಭ್ರಮವನ್ನು ಈ ಬಾರಿ 16 ಏಪ್ರಿಲ್ 2025ರಂದು ಮಂಗಳೂರಿನಲ್ಲಿ ಏರ್ಪಡಿಸಲಾಗಿದ್ದು, ಈ ಬಗ್ಗೆ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ಟ್ರಸ್ಟ್ ಪದಾಧಿಕಾರಿಗಳ ಸಭೆ 01 ಏಪ್ರಿಲ್ 2025ರಂದು ಬಲ್ಮಠದ ಕುಡ್ಲ ಸದಾಶಯ ಕಚೇರಿಯಲ್ಲಿ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.

    ತುಳುನಾಡಿನ ಕೃಷಿ ಸಮೃದ್ಧಿಯನ್ನು ಬಿಂಬಿಸುವ ತುಳುವರ ಯುಗಾದಿಯನ್ನು ಅರ್ಥವತ್ತಾಗಿ ಆಚರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಲ್ಲದೆ ತುಳು ಸಂಸ್ಕೃತಿಯನ್ನು ಬಿಂಬಿಸುವ ‘ಪದ – ನಲಿಕೆ’ ಹಾಡು ಮತ್ತು ಕುಣಿತಗಳ ‘ಬಿಸು ಮಿನದನ’ ಕಾರ್ಯಕ್ರಮವನ್ನು ವಿವಿಧ ಬಂಟರ ಸಂಘಗಳ ವತಿಯಿಂದ ನಡೆಸಲಾಗುವುದು ಹಾಗೂ ಇದರೊಂದಿಗೆ ವಿಷು ಹಬ್ಬದ ಮಹತ್ವವನ್ನು ತಿಳಿಸುವ ಸಲುವಾಗಿ ತಜ್ಞರಿಂದ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗುವುದು ಎಂದು ಸಭಾಧ್ಯಕ್ಷರು ತಿಳಿಸಿದರು‌. 14 ಎಪ್ರಿಲ್ 2025ರಂದು ನಾಡಿನೆಲ್ಲೆಡೆ ಹಬ್ಬದ ಸಂಭ್ರಮವಿರುವುದರಿಂದ ಈ ಕಾರ್ಯಕ್ರಮವನ್ನು 16 ಏಪ್ರಿಲ್ 2025ರ ಬುಧವಾರದಂದು ಸಂಜೆ ಘಂಟೆ 4.00ರಿಂದ ನಗರದ ಬಲ್ಮಠ ಕುಡ್ಲ ಪೆವಿಲಿನ್ ನಲ್ಲಿ ನಡೆಸಲಾಗುವುದು ಎಂದು ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ ತಿಳಿಸಿದರು.

    ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಇದರ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ, ‘ಸದಾಶಯ’ ಸಂಪಾದಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಪ್ರಮುಖರಾದ ರಾಮಚಂದ್ರ ಆಳ್ವ, ರತನ್ ಶೆಟ್ಟಿ , ಜಗದೀಶ ಶೆಟ್ಟಿ ಅಡ್ಯಾರ್, ಆರತಿ ಅರ್‌. ಆಳ್ವ ಹಾಗೂ ಗೀತಾ ಶೆಟ್ಟಿ ಸಲಹೆ ಸೂಚನೆಗಳನ್ನು ನೀಡಿದರು. ಪದಾಧಿಕಾರಿಗಳಾದ ಗೋಪಿನಾಥ ಶೆಟ್ಟಿ, ರಾಜಾ ಶೆಟ್ಟಿ, ಜೀವನ್ ಶೆಟ್ಟಿ, ಜಗನ್ನಾಥ ಶೆಟ್ಟಿ, ರಾಜ್ ಕುಮಾರ್ ಶೆಟ್ಟಿ, ಸತ್ಯಪ್ರಕಾಶ್ ಶೆಟ್ಟಿ, ನಾಗೇಶ್ ಶೆಟ್ಟಿ , ವತ್ಸಲ ಮಲ್ಲಿ, ಹಂಸಾ ಎನ್. ಶೆಟ್ಟಿ ಸಮಾಲೋಚನೆಯಲ್ಲಿ ಪಾಲ್ಗೊಂಡರು.

    Share. Facebook Twitter Pinterest LinkedIn Tumblr WhatsApp Email
    Previous Articleಡಾ. ಸಿಸಿರಾ ಇವರ ಬದುಕು ಬರಹ ವಿಚಾರಗೋಷ್ಠಿ, ಪ್ರಶಸ್ತಿ ಪ್ರದಾನ ಮತ್ತು ಕಥಾ ಸಂಕಲನ ಲೋಕಾರ್ಪಣೆ ಸಮಾರಂಭ | ಏಪ್ರಿಲ್ 10
    Next Article ಕೊಂಕಣಿ ಕವಿ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡೆಮಿ ಭಾಷಾ ಸಮಿತಿಗೆ ನೇಮಕ
    roovari

    Add Comment Cancel Reply


    Related Posts

    ಡಾ. ಎಂ.ಮೋಹನ ಆಳ್ವ ಇವರಿಗೆ ‘ಡಾ. ಜಿ. ಪಿ. ರಾಜ ರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’

    June 6, 2025

    ಕೊಂಡೆವೂರಿನಲ್ಲಿ ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’

    June 3, 2025

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ‘ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025’ | ಜೂನ್ 01

    May 28, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.