ಕೋಲಾರ : ಆಕೃತಿ ಪುಸ್ತಕ, ಜಂಗಮ ಕಲೆಕ್ವಿವ್, ಬೀ ಕಲ್ಚರ್, ಬಯಲು ಬಳಗ, ತಮಟೆ ಮೀಡಿಯಾ, ಬುಡ್ಡಿದೀಪ ಇವರ ಸಹಯೋಗದಲ್ಲಿ ಹುಸೇನಜ್ಜನ ನೆನಪಿನಲ್ಲಿ ಕೋಟಗಾನಹಳ್ಳಿ ರಾಮಯ್ಯನವರ ‘ದರ್ಗಾ ಮಾಳದ ಚಿತ್ರಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 08 ಏಪ್ರಿಲ್ 2025ರಂದು ಸಂಜೆ 4-30 ಗಂಟೆಗೆ ಕೋಲಾರ ಪಾಪರಾಜನಹಳ್ಳಿ ಬುಡ್ಡಿದೀಪ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಡಾ. ನೆಲ್ಲುಕುಂಟೆ ವೆಂಕಟೇಶಯ್ಯ ಮತ್ತು ದೀಪಾ ಧನರಾಜ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕೆ. ಚಂದ್ರಶೇಖರ್ ಇವರ ನಿರ್ದೇಶನದಲ್ಲಿ ಜಂಗಮ ಕಲೆಕ್ವಿವ್ ತಂಡದಿಂದ ‘ಪಂಚಮ ಪದ’ ಪ್ರಸ್ತುತಗೊಳ್ಳಲಿದೆ.