ಸುರತ್ಕಲ್ : ಸ್ಪರ್ಶ ಕಲಾವಿದರು ಸುರತ್ಕಲ್ ಮತ್ತು ಕಲಾಬ್ಧಿ ಲಲಿತ ಕಲಾ ಅಧ್ಯಯನ ಕೇಂದ್ರ ಗೋವಿಂದ ದಾಸ ಕಾಲೇಜು ಸುರತ್ಕಲ್ ಇವರ ಸಹಯೋಗದೊಂದಿಗೆ ‘ರಂಗ ಸಂಭ್ರಮ 2025’ ಸರಣಿ 3ರ ಕಾರ್ಯಕ್ರಮವನ್ನು ದಿನಾಂಕ 13 ಏಪ್ರಿಲ್ 2025ರಂದು ಸುರತ್ಕಲ್ ಗೋವಿಂದ ದಾಸ ಕಾಲೇಜು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ 5-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಸ್ಪರ್ಶ ಕಲಾ ತಂಡದ ನವರಸ ಕಲಾವಿದರು ಸುರತ್ಕಲ್ ಇವರಿಂದ ವಿನೋದ್ ಶೆಟ್ಟಿ ಕೃಷ್ಣಾಪುರ ಇವರ ನಿರ್ದೇಶನದಲ್ಲಿ ‘ಎನ್ನಂದಿನ’ ತುಳು ಕುತೂಹಲಕಾರಿ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.