ಪುತ್ತೂರು : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಆಯೋಜಿಸಿದ ರಾಜ್ಯಮಟ್ಟದ ಅಂತರ್ಕಾಲೇಜು ಸಾಂಸ್ಕೃತಿಕ ಉತ್ಸವದಲ್ಲಿ ಎರಡು ಚಿನ್ನ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
ಬೆಂಗಳೂರಿನ ಗ್ಲೋಬಲ್ ಅಕಾಡಮಿ ಆಫ್ ಟೆಕ್ನಾಲಜಿಯಲ್ಲಿ ನಡೆದ ‘ಇಂಟರ್ಯಾಕ್ಸ್-2025’ ಸ್ಪರ್ಧೆಯಲ್ಲಿ ಕಾಲೇಜಿನ ಭೂಮಿಕಾ ಕಲಾ ಸಂಘ ತಂಡವು ತನ್ನ ಅಪೂರ್ವ ಪ್ರತಿಭೆಯನ್ನು ಪ್ರದರ್ಶಿಸಿ ವಿಶೇಷ ಸಾಧನೆಯನ್ನು ಮಾಡಿದೆ. ಸುಮಾರು 100ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳ ಕಲಾ ತಂಡಗಳು ಭಾಗವಹಿಸಿದ್ದು, ಕಾಲೇಜಿನಿಂದ 34 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವ್ಯಂಗ್ಯಚಿತ್ರ ವಿಭಾಗದಲ್ಲಿ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಮನ್ನಿತ್ ಗೌಡ ಇವರು ಚಿನ್ನದ ಪದಕ, ಸ್ವರ ವಾದ್ಯ ಸ್ಪರ್ಧೆಯಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ತನ್ಮಯಿ ಉಪ್ಪಂಗಳ ಇವರು ಚಿನ್ನದ ಪದಕ ಹಾಗೂ ಶಾಸ್ತ್ರೀಯ ಸಂಗೀತ ಹಾಡುಗಾರಿಕಾ ವಿಭಾಗದಲ್ಲಿ ದ್ವಿತೀಯ ವರ್ಷದ ಎ. ಐ. ಎಂ. ಎಲ್. ವಿಭಾಗದ ಕಾರ್ತಿಕ ಶ್ಯಾಮ ಇವರು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಕಾಲೇಜಿನ ಸಾಂಸ್ಕೃತಿಕ ವೇದಿಕೆ ಭೂಮಿಕಾ ಕಲಾ ಸಂಘದ ನಿರ್ದೇಶಕ ಪ್ರೊ. ಸುದರ್ಶನ್.ಎಂ. ಎಲ್ ಹಾಗೂ ನಹನಿರ್ದೇಶಕಿ ಡಾ. ಶ್ವೇತಾಂಬಿಕಾ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆಯನ್ನು ಮಾಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ರಾಜಮಟ್ಟದ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ 2 ಚಿನ್ನ 1 ಕಂಚಿನ ಪದಕ
No Comments1 Min Read
Previous Articleಹಿರಿಯ ವಿದ್ವಾಂಸ ಡಾ. ಪಿ. ವಿ. ನಾರಾಯಣ ನಿಧನ
Next Article ನಾಟಕ ವಿಮರ್ಶೆ – ಬೆತ್ತಲಾಟ – ಅರ್ಥಪೂರ್ಣ ಅಸಾಂಗತ್ಯ