ಅಂಕೋಲಾ : ಕರ್ನಾಟಕ ಸಂಘ (ರಿ.) ಅಂಕೋಲಾ ಆಯೋಜಿಸುವ ಶ್ರೀದೇವಿ ಕೆರೆಮನೆ ಇವರ ಪಾಶ್ಚಾತ್ಯ ಲೇಖಕಿಯರ ಆಶಯ, ಚಿಂತನೆ ಮತ್ತು ಗ್ರಹಿಕೆಯ ‘ಎಲ್ಲೆಗಳ ಮೀರಿ’ ಹಾಗೂ ಸಮಕಾಲೀನ ಪ್ರಬಂಧ ಬರಹಗಳ ‘ಕಡಲು ಕಾನನದ ನಡುವೆ’ ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 06 ಏಪ್ರಿಲ್ 2025ರಂದು ಸಂಜೆ ಘಂಟೆ 4-00ಕ್ಕೆ ಅಂಕೋಲಾದ ಕನ್ನಡ ಭವನದಲ್ಲಿ ನಡೆಯಲಿದೆ.
ಕರ್ನಾಟಕ ಸಂಘ ಅಂಕೋಲಾ ಇದರ ಗೌರವಾಧ್ಯಕ್ಷ ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಕೆ. ವಿ. ನಾಯಕ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರಾವಳಿ ಮುಂಜಾವು ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಶ್ರೀ ಗಂಗಾಧರ ಹಿರೇಗುತ್ತಿ ಉದ್ಘಾಟಿಸಲಿದ್ದು, ಕಾರವಾರದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷರಾದ ಡಾ. ಎಂ. ಮಂಜುನಾಥ ಬಮ್ಮನಕಟ್ಟಿ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ. ಅಂಕೋಲಾದ ಕೆ. ಎಲ್. ಇ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿನಾಯಕ ಹೆಗಡೆ ಪುಸ್ತಕ ಪರಿಚಯಿಸಲಿದ್ದು, ಅಂಕೋಲಾದ ಕರ್ನಾಟಕ ಸಂಘ ಇದರ ಅಧ್ಯಕ್ಷರಾದ ಶ್ರೀ ಮಹಾಂತೇಶ ರೇವಡಿ ಉಪಸ್ಥಿತರಿರುವರು.