06 ಏಪ್ರಿಲ್ 2023, ಮೈಸೂರು: ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ. ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ, ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ಇದೇ ಏಪ್ರಿಲ್ 08 ಮತ್ತು 09ರಂದು ಸಂಜೆ 06.3೦ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಟನದ 2022-23ನೇ ಸಾಲಿನ ರಂಗಾಭ್ಯಾಸಿಗಳ ಎರಡನೇ ಅಭ್ಯಾಸಿ ಪ್ರಯೋಗ ಆಂಟನ್ ಚೆಕಾವ್ ಅವರ ರಚನೆಯ ‘ಚೆರ್ರಿ ತೋಟ’ ಎಂಬ ನಾಟಕವು ಎನ್.ಎಸ್.ಡಿ. ಪದವೀಧರೆ ಯಶಸ್ವಿನಿ ರಾವ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ನಾಟಕದ ಅನುವಾದ ಶ್ರೀ ವೆಂಕಟೇಶ್ ಪ್ರಸಾದ್ ಹಾಗೂ ವಿನ್ಯಾಸ ಶ್ರೀ ಅರುಣ್ ಮೂರ್ತಿ ಅವರದ್ದು.
ಯಶಸ್ವಿನಿ ರಾವ್
ತಮ್ಮ ಚಿಕ್ಕವಯಸ್ಸಿನಲ್ಲಿಯೇ ನಟನ ರಜಾ ಮಜಾದ ಮೂಲಕ ರಂಗಾಸಕ್ತಿಯನ್ನು ಬೆಳೆಸಿಕೊಂಡು, ರಂಗಭ್ಯಾಸಗಳಾದರು. ಮುಂದೆ ಇಂಜಿನಿಯರಿಂಗ್ ಪದವಿಧರೆ ಆದರೂ, ರಂಗಭೂಮಿಯ ಮೇಲಿನ ಆಸಕ್ತಿಯಿಂದ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ರಂಗ ಶಿಕ್ಷಣ ಪದವಿ ಪಡೆದರು. ಅಲ್ಲದೆ ಹಲವಾರು ಹವ್ಯಾಸಿ ಮತ್ತು ವೃತ್ತಿಪರ ತಂಡಗಳ ಜೊತೆ ಕೆಲಸ ಮಾಡಿ ಭಾರತದಾದ್ಯಂತ ಪ್ರದರ್ಶನಗಳನ್ನು ನೀಡಿರುತ್ತಾರೆ. ರಂಗಭೂಮಿ ಯಲ್ಲದೆ, ಭರತನಾಟ್ಯ ಮತ್ತು ಅಟ್ಟಕ್ಕಳ್ಳಿರಿ ಸೆಂಟರ್ ಫಾರ್ ಮೊಮೆಂಟ್ ಆರ್ಟ್ಸ್ ನಲ್ಲಿ ನೃತ್ಯದ ಪದವಿಯನ್ನು ಪಡೆದಿರುತ್ತಾರೆ. ಮಂಡ್ಯ ರಮೇಶ್, ಬಿ ಜಯಶ್ರೀ ,ಸುರೇಂದ್ರನಾಥ್ , ಬಾಲಾಜಿ ಮನೋಹರ್, ಅನುರಾಧ ಕಪೂರ್, ಸೂರ್ಯ ಮೋಹನ್ ಕುಲ ಶ್ರೇಷ್ಠ , ಜಾನ್ ಬ್ರಿಟಿನ್, ಅಭಿಲಾಶ್ ಪಿಳ್ಳೈ, ಚಂಪಾಶೆಟ್ಟಿ, ಸೇರಿದಂತೆ ಇನ್ನೂ ಹಲವಾರು ರಂಗ ಕರ್ಮಿಗಳ ಜೊತೆ ಕೆಲಸ ಮಾಡಿದ ಅನುಭವವಿದೆ. ತುಂಟರಾಬಿನ್, ಅಲಿಬಾಬ ಮತ್ತು 40 ಮಂದಿ ಕಳ್ಳರು ,ಅಗ್ನಿ ಮತ್ತು ಮಳೆ, ಬೆಸ್ತನ ಮೀನು, ಚೋರ ಚರಣ ದಾಸ, ಲೈಫ್ ಆಫ್ ಗೆಲಿಲಿಯೋ, ಮರ್ಚೆಂಟ್ ಆಫ್ ವೆನಿಸ್,blind side, surkh aasmaan, ಚಿರೆಬಂದಿವಾಡೆ, ಪ್ರತಿಮಾ ನಾಟಕಂ, ನಾಲೆ ವಾಲಿ ಲಡ್ಕಿ ,ಲೀಲಾಂತ್ಯ, ಗುಮ್ಮ ಬಂದ ಗುಮ್ಮ ,ಗಾಂಧಿ ಬಂದ, ಅಕ್ಕು, ಮಲ್ಲಿಗೆ ,ಮೋಜಿನ ಸೀಮೆ ಆಚೆ ಒಂದೂರು, ಮುಕುತಿ ಮೂಗುತಿ ,ಇನ್ನೊಬ್ಬ ದ್ರೋಣಚಾರ್ಯ, executing miss k, ಕರ್ಣ ರಸಾಯನ, beyond borders, ಕಾಡ್ಮನ್ಸ ಸೇರಿದಂತೆ ಇನ್ನೂ ಹಲವು ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. ಕೋತಿ ಬಾಲ , perfect bank robbery, ಮನ್ಮಥ ವಿಜಯ, tale spin, ಮರಣೋಪರಾಂತ, seven stages of grief, our secrets ಸೇರಿದಂತೆ ಇನ್ನೂ ಕೆಲವು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ.
ಚೆರ್ರಿ ತೋಟದ ಬಗ್ಗೆ:
Change Is The Only Constant ಎನ್ನುವ ಮಾತಿದೆ. ಆದರೆ ಈ ಬದಲಾವಣೆಯನ್ನು ಒಪ್ಪಿ ಮುನ್ನಡೆಯಬೇಕಾದರೆ ಬಹಳ ಕಷ್ಟ. ಈ ನಾಟಕದ ಲಿಬೋವ್ ಮತ್ತು ಗಯೇವ್ ಭಾವನಾತ್ಮಕ ಅಸ್ತಿತ್ವದ ನೆಲೆಯಲ್ಲಿ ಬದುಕುವ ಹಳೆಯ ಜಮೀನ್ದಾರಿ ವರ್ಗವನ್ನು ಪ್ರತಿನಿಧಿಸಿದರೆ, ಲೋಪಾಹಿನ್ ನವಶ್ರೀಮಂತ ಮಧ್ಯಮವರ್ಗದ ಪ್ರತಿನಿಧಿ. ಅನ್ಯ ಕ್ರಾಂತಿಯ ಮಾತನಾಡುವ ಬುದ್ದಿಜೀವಿ ಟ್ರೋಫಿಮೋನ ಮಾತುಗಳಲ್ಲಿ ಆಸಕ್ತಿ ಹೊಂದಿರುತ್ತಾಳೆ. ಇನ್ನು ವ್ಯವಹಾರ ಬಲ್ಲ ಸಾಕುಮಗಳು ವಾರಿಯಾಳ ಬಗ್ಗೆ ಲೋಪಾಹಿನ್‌ಗೆ ಚಿಂತಿಸಲು ಪುರುಸೊತ್ತು ಇಲ್ಲದಷ್ಟು ಕೆಲಸ, ಹಾಗೆಯೇ ಮನೆಯ ಸೇವಕ ಯಾಶಾ ಹೊಸ ನಾಗರೀಕತೆಯಿಂದ ಆಕರ್ಷಿತನಾಗಿರುವವ ಮತ್ತು ಬಹಳ ಕಾಲದಿಂದ ಇದೇ ಮನೆಯಲ್ಲಿ ಸೇವಕನಾಗಿರುವ ಮುದುಕ ಫಿಯರ್ಸ್, ಹೀಗೆ ಹಲವು ಆಸಕ್ತಿಗಳನ್ನು ಪ್ರತಿನಿಧಿಸುವ ವಿಭಿನ್ನ ಪಾತ್ರಗಳು ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯೊಂದಿಗೆ ಮುಖಾಮುಖಿಯಾಗುತ್ತಾ ಮುನ್ನಡೆಯುವ ಸನ್ನಿವೇಶಗಳನ್ನು ತೋರಿಸುತ್ತೆ.
ರಂಗಾಸಕ್ತರಿಗೆ ಆತ್ಮೀಯ ಸ್ವಾಗತ.
ಮಾಹಿತಿಗಾಗಿ 7259537777, 9480468327, 9845595505 ಸಂಪರ್ಕಿಸಿ