ಬೈಂದೂರು : ಲಾವಣ್ಯ (ರಿ.) ಬೈಂದೂರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು, ಶ್ರೀ ರಾಮ ಸೌಹಾರ್ದ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ಲಿ.) ಬೈಂದೂರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಯಕ್ಷಗಾನ ತಾಳಮದ್ದಲೆ’ ಕಾರ್ಯಕ್ರಮವನ್ನು ದಿನಾಂಕ 12 ಏಪ್ರಿಲ್ 2025ರಂದು ಸಂಜೆ 5-30 ಗಂಟೆಗೆ ಶ್ರೀ ಶಾರದಾ ವೇದಿಕೆಯಲ್ಲಿ ಆಯೋಜಿಸಲಾಗಿದೆ.
‘ಅಂಗದ ಸಂಧಾನ’ ಹಾಗೂ ‘ಮಾಗಧ ವಧೆ’ ಎಂಬ ಪ್ರಸಂಗಗಳು ಪ್ರಸ್ತುತಗೊಳ್ಳುವ ಈ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿ ಭಾಗವತರು ಗಣೇಶ್ ಕುಮಾರ್ ಹೆಬ್ರಿ, ಮದ್ದಳೆಯಲ್ಲಿ ಸುಬ್ರಹ್ಮಣ್ಯ ಚಿತ್ರಾಪು ಮತ್ತು ಚೆಂಡೆಯಲ್ಲಿ ಸ್ಕಂದ ಕೊನ್ನಾರು ಹಾಗೂ ಜಬ್ಬಾರ್ ಸಮೊ, ರಾಧಾಕೃಷ್ಣ ಕಲ್ಚಾರ್, ಪವನ್ ಕಿರಣ್ಕೆರೆ, ಶ್ರೀ ಸತೀಶ ಶೆಟ್ಟಿ ಮೂಡುಬಗೆ ಮತ್ತು ಶಿವಪ್ರಸಾದ್ ಭಟ್ಕಳ ಇವರುಗಳು ಅರ್ಥಧಾರಿಗಳಾಗಿ ಸಹಕರಿಸಲಿದ್ದಾರೆ.