ಕುಂದಾಪುರ : ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳದವರಿಂದ ಪ್ರಖ್ಯಾತ ಪರಿಣಿತ ಯಕ್ಷ ಕಲಾವಿದರ ಪ್ರಬುದ್ಧ ಪ್ರಭಾವೀ ಪ್ರದರ್ಶನವನ್ನು ದಿನಾಂಕ 11 ಏಪ್ರಿಲ್ 2025ರಂದು ಸಂಜೆ 6-30 ಗಂಟೆಗೆ ಕಾರ್ಕಡದ ಭೂಮಿಕ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವದಲ್ಲಿ ಪಂಚ ಮೇಳದ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ ಬೈಲೂರು ಇವರಿಗೆ ‘ಯುಗಾದಿ ವಸಂತ ಪುರಸ್ಕಾರ’ವನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ್ ಕುಮಾರ ಕಲ್ಕೂರ ಇವರು ಪ್ರಧಾನ ಮಾಡಲಿದ್ದು, ಉಪನ್ಯಾಸಕರಾದ ಎಚ್. ಸುಜಯೀಂದ್ರ ಹಂದೆ ಇವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಬಳಿಕ ‘ಬಬ್ರುವಾಹನ ಕಾಳಗ’ ಮತ್ತು ‘ಶ್ರೀ ಶಿವಪಂಚಾಕ್ಷರಿ ಮಹಿಮೆ’ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.