ಸಾಗರ : ಮಾನ್ವಿತಾ ಹೆಲ್ತ್ ಕೇರ್ ಚೆನ್ನೈ, ಸ್ಪಂದನಾ ಪ್ರೊ. ಆಶ್ರಯದಲ್ಲಿ ಸಾಕೇತ ಕಲಾವಿದರು ಕೆಳಮನೆ ಪ್ರಸ್ತುತ ಪಡಿಸುವ ‘ರಾಮಾಯಣ ಚಾಕ್ಷುಷ ಯಜ್ಞ’ ಯಕ್ಷಗಾನ ಸಪ್ತಾಹವನ್ನು ದಿನಾಂಕ 12 ಏಪ್ರಿಲ್ 2025ರಿಂದ 18 ಏಪ್ರಿಲ್ 2025ರವೆರೆಗೆ ಪ್ರತಿದಿನ ರಾತ್ರಿ 7-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ದಿನಾಂಕ 12 ಏಪ್ರಿಲ್ 2025ರಂದು ತಲವಾಟ ಶಾಲಾ ಆವರಣದಲ್ಲಿ ‘ಪುತ್ರಿಕಾಮೇಷ್ಠಿ – ಸೀತಾಕಲ್ಯಾಣ ಶ್ರೀರಾಮ ವಿಜಯ’, ದಿನಾಂಕ 13 ಏಪ್ರಿಲ್ 2025ರಂದು ಹಂಸಗಾರು ಶ್ರೀ ಸಿದ್ಧಿವಿನಾಯಕ ಲಕ್ಷ್ಮೀನಾರಾಯಣ ದೇವಸ್ಥಾನದ ಆವರಣದಲ್ಲಿ ‘ಪಟ್ಟಾಭಿಷೇಕ – ವನಾಭಿಗಮನ ಭರತಾಗಮನ’, ದಿನಾಂಕ 14 ಏಪ್ರಿಲ್ 2025ರಂದು ಭೀಮನಕೋಣೆ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ಕಲ್ಯಾಣ ಮಂದಿರದಲ್ಲಿ ‘ಪಂಚವಟಿ ಸೀತಾಪಹಾರ’, ದಿನಾಂಕ 15 ಏಪ್ರಿಲ್ 2025ರಂದು ಸಾಗರ ಶ್ರೀನಗರ ನೃತ್ಯಭಾಸ್ಕರ ಸಭಾಂಗಣದಲ್ಲಿ ‘ವಾಲಿ ವಧೆ’, ದಿನಾಂಕ 16 ಏಪ್ರಿಲ್ 2025ರಂದು ಪುರಪ್ಪೆಮನೆ ಶ್ರೀ ಉಮಾಮಹೇಶ್ವರ ದೇವಳದ ಆವರಣದಲ್ಲಿ ‘ಲಂಕಾದಹನ’, ದಿನಾಂಕ 17 ಏಪ್ರಿಲ್ 2025ರಂದು ನಂದಿತಳೆ ಸೊಸೈಟಿ ಆವರಣದಲ್ಲಿ ‘ಅತಿಕಾಯ ಇಂದ್ರಜಿತು’, ದಿನಾಂಕ 18 ಏಪ್ರಿಲ್ 2025ರಂದು ಗುಮಗೋಡು ಶ್ರೀಗೋಪಾಲಕೃಷ್ಣ ದೇವಳದ ಆವರಣದಲ್ಲಿ ‘ರಾವಣವಧೆ ಸೀತಾ ಪರಿತ್ಯಾಗ ಲವಕುಶ’ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.