ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ, ಮಕ್ಕಳ ವಿಭಾಗ ಅರ್ಪಿಸುವ ‘ಚಿಣ್ಣರ ಚಿತ್ತಾರ 2025’ದ ಪುಟಾಣಿಗಳಿಂದ ಎರಡು ಚೊಟಾಣಿ ನಾಟಕಗಳು, ಶಿಶುಗೀತೆಗಳ ಗಾಯನ ಮತ್ತು ಕಲಾಪ್ರದರ್ಶನವನ್ನು ದಿನಾಂಕ 14 ಏಪ್ರಿಲ್ 2025ರಂದು ಸಂಜೆ ಗಂಟೆ 5-3ಕ್ಕೆ ಹಂಪಿನಗರ ಚಿತ್ರಕೂಟ ಮಾಂಟೆಸ್ಸರಿಯಲ್ಲಿ ಆಯೋಜಿಸಲಾಗಿದೆ.
ಮಕ್ಕಳ ಸಾಹಿತಿ ಶ್ರೀಮತಿ ಪ್ರೇಮಾ ಶಿವಾನಂದ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಡಾ. ಎಸ್.ವಿ. ಕಶ್ಯಪ್ ಇವರು ರಚಿಸಿರುವ ಡಾ. ಸುಷ್ಮಾ ಎಸ್.ವಿ. ಇವರ ನಿರ್ದೇಶನದಲ್ಲಿ ‘ಚಿರತೆ ಚರಿತೆ’ ಮತ್ತು ಡಾ. ಬೃಂದಾ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ಸಂಖ್ಯಾ ನಗರಿ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.