ಕುಳಾಯಿ : ಯನೋಪೊಯ ಇನ್ಸ್ಟಿಟ್ಯೂಟ್ ಅಫ್ ಅರ್ಟ್ಸ್, ಸೈನ್ಸ್, ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಬಲ್ಮಠ ಇದರ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆ ಫಿಶರಿಶ್ ಚಿತ್ರಾಪುರ ಕುಳಾಯಿ ಇಲ್ಲಿನ ವಿದ್ಯಾರ್ಥಿಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಸಲುವಾಗಿ ಹಮ್ಮಿಕೊಂಡ ಅಂಬೇಡ್ಕರ್ ಚಿತ್ರ ರಚನೆ ಸ್ಪರ್ಧೆಯು ದಿನಾಂಕ 14 ಏಪ್ರಿಲ್ 2025 ರಂದು ನಡೆಯಿತು.
ಸ್ಪರ್ಧೆಯ ವಿಜೇತರಿಗೇ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮಾಧವ ಸುವರ್ಣ ಬಹುಮಾನ ವಿತರಿಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಇವರು ಅಂಬೇಡ್ಕರ್ ಸಾಧನೆ ಕುರಿತು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಅರುಣ್ ದಾಸ್, ವಿಜಯಲಕ್ಷ್ಮೀ ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಕುಮಾರ್ ಚಿತ್ರಾಪುರ, ಶ್ರೀನಿವಾಸ್ ಪುತ್ರನ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮಂಜುಳಾ, ಸದಸ್ಯೆ ಶಶಿಕಲಾ, ಶಿಕ್ಷಕಿ ಸುಕೇಶಿನಿ, ಸಿಂತಿಯ, ನೀತ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ಪ್ರವೇಶ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಮುಖ್ಯ ಶಿಕ್ಷಕಿ ಶೋಭ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯದರ್ಶಿ ನಿತೀಶ್ ಮತ್ತು ನಂದನ ಟಿ. ಎಸ್. ಕಾರ್ಯಕ್ರಮ ಸಂಯೋಜಿಸಿದರು.