ಮಂಗಳೂರು : ಮಂಗಳೂರು ಹಾಗೂ ಉಡುಪಿಯಲ್ಲಿ ಕಾರ್ಯಾಚರಿಸುತ್ತಿರುವ ನೃತ್ಯ ಸುಧಾ (ರಿ) ಸಂಸ್ಥೆ ಪ್ರಸ್ತುತ ಪಡಿಸುವ ‘ನೃತ್ಯೋತ್ಕರ್ಷ – 2025’ ಕಾರ್ಯಕ್ರಮವು ದಿನಾಂಕ 20 ಏಪ್ರಿಲ್ 2025ರಂದು ಮಂಗಳೂರಿನ ಕುದ್ಮಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
ಅಂದು ಸಂಜೆ ಘಂಟೆ 5.00 ಕ್ಕೆ ದೀಪ ಪ್ರಜ್ವಲನ, 5.30 ರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಸಂಜೆ ಘಂಟೆ 7.00 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಆಕಾಶವಾಣಿಯ ನಿವೃತ್ತ ಮೃದಂಗ ಕಲಾವಿದರು ಹಾಗೂ ಹಿರಿಯ ಮೃದಂಗ ವಿದ್ವಾಂಸರಾದ ಗುರು ವಿದ್ವಾನ್ ಶ್ರೀ ಕುಂಜೂರು ಹೆಚ್. ರವಿ ಕುಮಾರ್ ಬಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಗುರು ವಿದುಷಿ ಶ್ರೀಮತಿ ಸುಮಂಗಲಾ ರತ್ನಾಕರ್ ರಾವ್ ಇವರ ನಾಟ್ಯಾರಾಧನ ಹಾಗೂ ಯಕ್ಷಾರಾಧನ ಕಲಾ ಕೇಂದ್ರ ಉರ್ವ ಸಂಸ್ಥೆಯ ಕಲಾವಿದರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ನೃತ್ಯ ಸುಧಾ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧೀಂದ್ರ ರಾವ್ ಹಾಗೂ ನೃತ್ಯ ನಿರ್ದೇಶಕಿ ಹಾಗೂ ಸಂಸ್ಥೆಯ ಕಾರ್ಯದರ್ಶಿಯಾದ ವಿದುಷಿ ಸೌಮ್ಯ ಸುಧೀಂದ್ರ ರಾವ್ ಸರ್ವರನ್ನು ಸ್ವಾಗತಿಸಿದ್ದಾರೆ.