ಮಂಗಳೂರು : ಕಥಾ ಬಿಂದು ಪ್ರಕಾಶನ ಏರ್ಪಡಿಸಿದ ‘ಕಥಾ ಬಿಂದು ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವು ದಿನಾಂಕ 18 ಏಪ್ರಿಲ್ 25ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರಿನ ಜನಪ್ರಿಯ ದಿನಪತ್ರಿಕೆ ‘ಜಯಕಿರಣ’ದ ವಾರದ ವಿಭಾಗದಲ್ಲಿ ಪ್ರಕಟವಾದ ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ಶಸ್ತ್ರ ಕ್ರಿಯಾ ಕ್ಷಾರ ತಜ್ಞ ಹಾಗೂ ಬರಹಗಾರರಾದ ಡಾ. ಸುರೇಶ ನೆಗಳಗುಳಿಯವರ ಕವನಗಳ ಸಂಕಲನ ‘ಕಾವ್ಯಕಿರಣ’ವನ್ನು ಲೋಕಾರ್ಪಣೆಗೊಳಿಸಲಾಯಿತು.
63 ಕವನಗಳಿರುವ ಈ ಸಂಕಲನವು ತಯಾರಾಗುವಲ್ಲಿ ತನ್ನ. ರಚನೆಗಳನ್ನು ಪ್ರಕಟಿಸುತ್ತಾ ಸ್ಪೂರ್ತಿಯಾದ ಜಯಕಿರಣ ದಿನಪತ್ರಿಕೆ ಸಂಪಾದಕ ಶ್ರೀ ಜಿತೇಶ್ ಹಾಗೂ ಪ್ರಕಟಿಸುವಲ್ಲಿ ನೆರವಾದ ಕಥಾಬಿಂದು ಪ್ರಕಾಶನದ ಪಿ. ವಿ. ಪ್ರದೀಪ ಕುಮಾರ್ ಇವರನ್ನು ಲೇಖಕರು ಸ್ಮರಿಸಿದರು. “ಇದರಲ್ಲಿ ಗಜಲ್, ನವ್ಯ ನವ್ಯೋತ್ತರ, ಷಟ್ಪದಿ ,ತನಗ ಮುಂತಾದ ಪ್ರಕಾರಗಳ ತನ್ನ ರಚನೆಗಳನ್ನು ಪ್ರಕಟಿಸಲಾಗಿದೆ. ಇದು ಹಲವು ಪ್ರಕಾರಗಳ ಮಾಹಿತಿಗೆ ಅನುಕೂಲ” ಎಂದು ತಿಳಿಸಿದರು.
ಸಮಾರಂಭದಲ್ಲಿ ಧರ್ಮದರ್ಶಿಶ್ರೀ ಹರಿಕೃಷ್ಣ ಪುನರೂರು ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಯುಗಪುರುಷ ಪ್ರಕಾಶನದ ಮುಖ್ಯಸ್ಥರಾದ ಭುವನಾಭಿರಾಮ ಉಡುಪ, ರತ್ನಾ ಕೆ. ಭಟ್, ಪಡಂಬೈಲು ಡಾ. ಕೃಷ್ಣೇಗೌಡ, ಮಂಗಳೂರು ವಿ. ವಿ. ಇದರ ಪ್ರಾಚಾರ್ಯರಾದ ಡಾ. ಗಣಪತಿ ಗೌಡ, ವಿ. ವಿ. ಪ್ರಾಧ್ಯಾಪಕರಾದ ಡಾ. ಮೇಜರ್ ಜಯರಾಜ್ ಎನ್., ಹಿರಿಯ ಕವಿ ಹರಿ ನರಸಿಂಹ ಉಪಾಧ್ಯಾಯ, ಕೊಳಚಪ್ಪೆ ಗೋವಿಂದ ಭಟ್, ಲಕ್ಷ್ಮಿ ವಿ. ಭಟ್, ಪ್ರದೀಪ್ ಕುಮಾರ್ ಪಿ. ವಿ. , ಸತ್ಯವತಿ ಭಟ್ ಕೊಳಚಪ್ಪು, ವಾಮನರಾವ್ ಬೇಕಲ್, ಜಯಾನಂದ ಪೆರಾಜೆ, ಶಾಂತಾ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.
ಲೇಖಕರ ಶುಭಪ್ರಕಾಶನ ಹೊರತಂದ ಈ ಕೃತಿಯನ್ನು ಕಥಾಬಿಂದು ಪ್ರಕಾಶನವು ಪ್ರಕಟಿಸಿದೆ. ಇದೇ ವೇಳೆ ಡಾ ಸುರೇಶ ನೆಗಳಗುಳಿ ಅವರಿಗೆ “ಕನ್ನಡ ಶ್ರೀ” ಎಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು ಶ್ರೀಮತಿ ವಿದ್ಯಾಶ್ರೀ ಅಡೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು.
Subscribe to Updates
Get the latest creative news from FooBar about art, design and business.
Previous Article“ಯಕ್ಷ ಪಕ್ಷ- ರಜತ ಸರಯೂ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ