ಬೆಳ್ಳಿಪ್ಪಾಡಿ : ನಿವೃತ್ತ ಅಧ್ಯಾಪಕ ಬಿ. ಹುಕ್ರಪ್ಪ ಗೌಡ ಬೆಳ್ಳಿಪ್ಪಾಡಿ ಅವರ ‘ಶ್ರೀರಾಮಾಂಜನೇಯ’ ನೂತನ ಗೃಹಪ್ರವೇಶೋತ್ಸವದ ಸುಸಂದರ್ಭದಲ್ಲಿ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಸದಸ್ಯರಿಂದ “ ಶಕ್ರಜಿತು “ ಯಕ್ಷಗಾನ ತಾಳಮದ್ದಳೆ ದಿನಾಂಕ ದಿನಾಂಕ 16 ಏಪ್ರಿಲ್ 2025ರಂದು ನಡೆಸಲ್ಪಟ್ಟಿತು.
ಸಂಘದ ಹಿರಿಯ ಭಾಗವತ ಗುರುಗಳಾದ ವಿಶ್ವವಿನೋದ ಬನಾರಿಯವರ ಸಂಯೋಜನೆಯಲ್ಲಿ ಮುನ್ನಡೆದ ಈ ತಾಳಮದ್ದಳೆಯ ಭಾಗವತರಾಗಿ ಮೋಹನ ಮೆನಸಿನಕಾನ, ಕುಮಾರಿ ವಿದ್ಯಾಶ್ರೀ ಆಚಾರ್ಯ ಈಶ್ವರ ಮಂಗಲ , ಅಂಕುಶ್ ಎಣ್ಣೆಮಜಲು ಅವರು ಕಾಣಿಸಿಕೊಂಡರು.
ಚೆಂಡೆ ಮದ್ದಳೆ ವಾದನದಲ್ಲಿ ಶ್ರೀಧರ ಆಚಾರ್ಯ ಈಶ್ವರ ಮಂಗಲ, ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ವಿಷ್ಣು ಶರಣ ಬನಾರಿ, ಬಿ. ಎಚ್. ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ ಅವರು ಸಹಕರಿಸಿದರು. ಅರ್ಥಧಾರಿಗಳಾಗಿ ಬೆಳ್ಳಿಪ್ಪಾಡಿ ಸದಾಶಿವ ರೈ, ಐತಪ್ಪ ಗೌಡ ಮುದಿಯಾರು, ಯಂ. ಬಾಲಕೃಷ್ಣ ಗೌಡ ದೇಲಂಪಾಡಿ, ಯಂ. ರಮಾನಂದ ರೈ ದೇಲಂಪಾಡಿ, ಡಿ. ರಾಮಣ್ಣ ಮಾಸ್ತರ್ ದೇಲಂಪಾಡಿ, ನಾರಾಯಣ ದೇಲಂಪಾಡಿ, ರಾಮನಾಯ್ಕ ಬಸಿರಡ್ಕ, ಶಾಂತಾಕುಮಾರಿ ದೇಲಂಪಾಡಿ, ಮಾಸ್ಟರ್ ಶ್ರೀದೇವ್ ಈಶ್ವರಮಂಗಲ ಅವರು ತಮ್ಮ ಕಲಾ ಪ್ರೌಢಿಮೆಯಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಕಲಾವಿದರನ್ನು ವ್ಯವಸ್ಥಾಪಕರು ಶಾಲು ಹೊದಿಸಿ ಗೌರವಿಸಿದರು. ಹಿರಿಯ ಕಲಾವಿದ ಬೆಳ್ಳಿಪ್ಪಾಡಿ ಸದಾಶಿವ ರೈ ಅವರು ಸಂದರ್ಭೋಚಿತ ಮಾತನಾಡಿದರು. ಜಯರಾಜ್ ಬಿ. ಎಚ್. ವಂದನಾರ್ಪಣೆಗೈದರು.
Subscribe to Updates
Get the latest creative news from FooBar about art, design and business.
Previous Articleಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ “ಚಿಣ್ಣರ ಕಲರವ”
Next Article ಮಂಚಿ ನಾಟಕೋತ್ಸವ ‘ರಂಗಭೂಮಿಕಾ-2025’ | ಏಪ್ರಿಲ್ 26