ಮಂಗಳೂರು : ಆನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲ,ಮಂಗಳೂರು ಶಾಖೆಯು ಆಯೋಜಿಸಿರುವ “ಜ್ಞಾನ ವಿಕಾಸ ಸಂಸ್ಕಾರ ಶಿಬಿರ -2025 ಇದರ ಉದ್ಘಾಟನಾ ಸಮಾರಂಭವು ದಿನಾಂಕ 21 ಏಪ್ರಿಲ್ 2025ರಂದು ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನ ಉದ್ಘಾಟಿಸಿದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತಾಧಿಕಾರಿ ಕೆ.ಉಮೇಶ್ ಆಚಾರ್ಯ ಮಾತನಾಡಿ “ಇಂದಿನ ಯುವ ಪೀಳಿಗೆಯಲ್ಲಿ ನಶಿಸುತ್ತಿರುವ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಜ್ಞಾನವು ಚಿಗುರಿಕೊಳ್ಳಲು ಜ್ಞಾನ ವಿಕಾಸ ಸಂಸ್ಕಾರ ಶಿಬಿರವು ಮಾರ್ಗದರ್ಶಕವಾಗಲಿ” ಎಂದು ಹಾರೈಸಿದರು.
ಇನ್ನೋರ್ವ ಅತಿಥಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಇದರ ಅಧ್ಯಕ್ಷರಾದ ಡಾ. ಎಸ್. ಆರ್. ಹರೀಶ್ ಆಚಾರ್ಯ ಮಾತನಾಡಿ “ನಮ್ಮೊಳಗಿರುವ ಮೂರನೇ ದೃಷ್ಟಿಯನ್ನು ತೆರೆಯುವ ಪ್ರಯತ್ನ ಇಂದು ಆಗಬೇಕಾದ ಅನಿವಾರ್ಯತೆ ಬಂದೊದಗಿದೆ, ಕುಂಟಿತಗೊಳ್ಳುತ್ತಿರುವ ಮಕ್ಕಳ ಯೋಚನಾ ಸಾಮರ್ಥ್ಯವನ್ನು ಉದ್ದೀಪನಗೊಳಿಸುವ ಕೆಲಸ ಇಂತಹ ಶಿಬಿರಗಳಿಂದ ಆಗಬೇಕು” ಎಂದು ಹಾರೈಸಿದರು.
ವೇದಿಕೆಯಲ್ಲಿ ಸಮಾಜ ಸೇವಕ ಪುಂಡರೀಕಾಕ್ಷ ಆಚಾರ್ಯ, ಗುರು ಸೇವಾ ಪರಿಷತ್ ಇದರ ಅಧ್ಯಕ್ಷರಾದ ಶೇಖರ ಆಚಾರ್ಯ ಮಂಗಳಾದೇವಿ, ಕಾಳಿಕಾಂಬಾ ಸೇವಾ ಸಮಿತಿಯ ಕಾರ್ಯದರ್ಶಿ ಜೆ. ವಿವೇಕ್ ಉಪಸ್ಥಿತರಿದ್ದರು. ಒಂದು ವಾರಗಳ ಕಾಲ ಜರಗಲಿರುವ ಈ ಶಿಬಿರದಲ್ಲಿ 6ನೇ ತರಗತಿಯಿಂದ 10ನೇ ತರಗತಿ ವರೆಗಿನ ಸುಮಾರು ಎಪ್ಪತ್ತ ಐದು ವಿದ್ಯಾರ್ಥಿಗಳು ಭಾಗವಹಿಸಲಿರುವರು.
ಉದ್ಘಾಟನಾ ಸಮಾರಂಭದಲ್ಲಿ ಗುರುರಾಜ್ ಕೆ. ಜೆ. ಸ್ವಾಗತಿಸಿ, ಪಶುಪತಿ ಉಳ್ಳಾಲ್ ಪ್ರಸ್ತಾವನೆ ಗೈದು, ಜಗದೀಶ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕಾರ್ತಿಕ್, ಸತೀಶ್ ಆಚಾರ್ಯ ಸುರುಳಿ, ಗುಣಕರ ಟಿ., ಗಣೇಶ್ ಕೆಮ್ಮಣ್ಣು, ಉಮೇಶ್ ತೀರ್ಥಹಳ್ಳಿ ಮೊದಲಾದವರು ಸಹಕರಿಸಿದರು.
Subscribe to Updates
Get the latest creative news from FooBar about art, design and business.