ಕೋಟ : ಶ್ರೀ ಹಂದೆ ವಿಷ್ಣುಮೂರ್ತಿ ಮತ್ತು ಶ್ರೀ ಹಂದೆ ವಿನಾಯಕ ದೇವಸ್ಥಾನದ ಶ್ರೀಮನ್‌ಮಹಾರಥೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 29 ಏಪ್ರಿಲ್ 2025 ರಿಂದ 01 ಮೇ 2025ರ ವರೆಗೆ ನಡೆಯಲಿದೆ.
ದಿನಾಂಕ 29 ಏಪ್ರಿಲ್ 2025 ರಂದು ಸಂಜೆ ಘಂಟೆ 5.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಹೆಚ್. ಸೂರ್ಯನಾರಾಯಣ ಹಂದೆ ನಿವೃತ್ತ ಶಿಕ್ಷಕರ ಪ್ರಾಯೋಜನೆಯಲ್ಲಿ ಯಕ್ಷಗಾನದ ಎರಡನೇ ವೇಷದ ಕಲಾವಿದರಾದ ಬಳ್ಕೂರು ಕೃಷ್ಣಯಾಜಿ, ಶ್ರೀಪಾದ ಭಟ್ ಥಂಡಿಮನೆ, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ ಇವರಿಗೆ ವಿಶೇಷ ಪುರಸ್ಕಾರ, ಕಡಬಾಳ ಉದಯ ಹೆಗಡೆ ಇವರಿಗೆ ‘ದಿ. ನರಸಿಂಹ ಸೋಮಯಾಜಿ ಪ್ರಶಸ್ತಿ–2025’ ಮತ್ತು ಊರಿನ ಸಾಧಕರಾದ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಹೆಚ್. ಸುಜಯೀಂದ್ರ ಹಂದೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತಾರಾನಾಥ ಹೊಳ್ಳ, ಪಿ. ಎಚ್. ಡಿ. ಪದವೀಧರಾದ ಶಮಂತ ಕುಮಾರ್, ದೇವಸ್ಥಾನದ ವಿಶೇಷ ದಾನಿಗಳಾದ ಶ್ರೀಮತಿ ಜಯಲಕ್ಷ್ಮೀ ಎನ್. ಮತ್ತು ಜಗದೀಶ ಬಾಸ್ರಿಯವರನ್ನು ಸನ್ಮಾನಿಸಲಾಗುವುದು. ಕರ್ನಾಟಕ ಸರ್ಕಾರದ ಶೌರ್ಯ ಪ್ರಶಸ್ತಿ ಪುರಸ್ಕೃತ ಮಾ. ಧೀರಜ್ ಐತಾಳ್, ಚಿತ್ರ ಕಲಾವಿದೆ ಕು. ಪ್ರಜ್ಞಾ ಮತ್ತು ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ ವಿಜೇತರಾದ ಕು. ಅನುಶ್ರೀ ಇವರನ್ನು ಅಭಿನಂದನೆ ಸಲ್ಲಿಸಲಾಗುವುದು.
ಸಭಾಕಾರ್ಯಕ್ರಮದ ಬಳಿಕ ಸಂಜೆ ಘಂಟೆ 7.30 ರಿಂದ ಬೆಂಗಳೂರಿನ ಯಕ್ಷದೇಗುಲ ತಂಡದ ಸದಸ್ಯರಿಂದ ಸುದರ್ಶನ ಉರಾಳರ ಸಂಯೋಜನೆಯಲ್ಲಿ ‘ರಾವಣ ವಧೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಲಾವಿದರಾಗಿ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಶಿವಾನಂದ ಕೋಟ, ಸುದೀಪ ಉರಾಳ, ಶ್ರೀಪಾದ ಭಟ್ ಥಂಡಿಮನೆ, ಸುಜಯೀಂದ್ರ ಹಂದೆ, ತಮ್ಮಣ್ಣ ಗಾಂವ್ಕರ್, ಮನೋಜ್ ಭಟ್, ರಾಘವೇಂದ್ರ ತುಂಗ ಕೆ., ಆದಿತ್ಯ ಭಟ್, ನರಸಿಂಹ ತುಂಗ ಇನ್ನಿತರರು ಭಾಗವಹಿಸಲಿದ್ದಾರೆ.