ಬೆಂಗಳೂರು : ರಾಗಸುಧಾ ಪೌಂಡೇಶನ್ ಜೆ. ಪಿ. ನಗರ ಇವರ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ “ಆಧುನಿಕ ಮಹಿಳೆ, ಪ್ರಗತಿಯ ಕಹಳೆ” ಕಾರ್ಯಕ್ರಮದಡಿಯಲ್ಲಿ ಬೆಂಗಳೂರಿನ ಯಕ್ಷದೇಗುಲ ಮಕ್ಕಳ ತಂಡದಿಂದ ‘ಅಭಿಮನ್ಯು ಕಾಳಗ’ ಯಕ್ಷಗಾನ ಪ್ರದರ್ಶನ ಡ್ 26 ಏಪ್ರಿಲ್ 2025 ರಂದು ಬೆಂಗಳೂರಿನ ಜೆ.ಪಿ. ನಗರದ ಕಲ್ಚರಲ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆಯಿತು.
ಪ್ರಿಯಾಂಕ ಕೆ. ಮೋಹನ್ ನಿರ್ದೇಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯಕ್ಷಗುರುಗಳಾದ ಸುದರ್ಶನ ಉರಾಳ, ಪ್ರೀತಿ ಕೆ. ಮೋಹನ್ ಹಾಗೂ ಕಲಾವಿದರಾಗಿ ಶ್ರೀರಾಮ, ಶ್ರೀ ವಿದ್ಯಾ, ಸರಸ್ವತಿ, ಚಿನ್ಮಯಿ, ಮೇಘನಾ, ಚೈತ್ರ ಹಾಗೂ ಶಾಶ್ವತ್ ಭಾಗವಹಿಸಿದರು. ಹಲವು ಕಾರ್ಯಕ್ರಮದ ನಡುವೆ ಯಕ್ಷಗಾನ ಪ್ರದರ್ಶನ ಬಲುವಾಗಿ ರಂಜಿಸಿತು. ಕಾರ್ಯಕ್ರಮ ಮುಗಿದ ನಂತರ ಭಾಗವಹಿಸಿದ ಕಲಾವಿದರಿಗೆ ಗೌರವಿಸಿ, ಪ್ರಮಾಣಪತ್ರ ನೀಡಲಾಯಿತು.