ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಇದರ ವತಿಯಿಂದ ಯಕ್ಷಗಾನದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಆಯೋಜಿಸುತ್ತಿದೆ. ಯಕ್ಷಗಾನ ತೆಂಕು ಮತ್ತು ಬಡಗುತಿಟ್ಟು ಹಿಮ್ಮೇಳ ಹಾಗೂ ಮುಮ್ಮೇಳದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೌಲಭ್ಯಕ್ಕಾಗಿ, ಪ್ರೌಢ ಶಾಲೆ – 6ರಿಂದ 9 ತರಗತಿ, ಪದವಿಪೂರ್ವ ಕಾಲೇಜು (ಕಲಾ-ವಾಣಿಜ್ಯ ಮಾತ್ರ) ಹಾಗೂ ಪದವಿ ತರಗತಿಗಳಿಗೆ ದಾಖಲಾಗ ಬಯಸುವ ಆಸಕ್ತ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ವಿವರಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡುವುದು. ವಿಳಾಸ : ಡಾ. ಎಂ. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ – 574227. ಹೆಚ್ಚಿನ ಮಾಹಿತಿಗಾಗಿ 9480529236 ಸಂಖ್ಯೆಯನ್ನು ಸಂಪರ್ಕಿಸಿರಿ.