ಬೆಂಗಳೂರು : ಬಸವ ವೇದಿಕೆಯು ಕಳೆದ 29 ವರ್ಷಗಳಿಂದ ನಾಡಿನ ವಿವಿಧ ಕ್ಷೇತ್ರಗಳ ಮಹಾನ್ ಸಾಧಕರುಗಳಿಗೆ “ಬಸವ ಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ.ಈ ದಿಸೆಯಲ್ಲಿ ಹಲವಾರು ಹಿರಿಯ ಸಾಹಿತಿಗಳಿಗೆ ನಾಡಿನ ಪ್ರತಿಷ್ಠಿತ ವ್ಯಕ್ತಿಗಳಿಗೆ ಪ್ರಶಸ್ತಿಯನ್ನು ಈಗಾಗಲೇ ನೀಡಿ ಗೌರವಿಸಿದೆ ಈ ವರ್ಷ ಶರಣ ಚಿಂತಕರು 87ನೇ ಅಖಿಲ ಭಾರತ ಕನ್ನಡ ಸಮ್ಮೇಳನ ಅಧ್ಯಕ್ಷರಾಗಿದ್ದ ನಾಡೋಜ ಗೊ. ರು. ಚನ್ನಬಸಪ್ಪನವರಿಗೆ 2025ನೇ ಸಾಲಿನ ‘ಬಸವ ಶ್ರೀ’ ಪ್ರಶಸ್ತಿಯನ್ನು 03 ಮೇ 2025ರ ಶನಿವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನೀಡಿ ಗೌರವಿಸುತ್ತಿದೆ.
ಇದೇ ಸಂದರ್ಭದಲ್ಲಿ ‘ವಚನ ಸಾಹಿತ್ಯ ಶ್ರೀ’ ಪ್ರಶಸ್ತಿಯನ್ನು ಬಿಜಾಪುರದ ಬಿ. ಎಲ್. ಡಿ. ಸಂಸ್ಥೆಯ ವಚನ ಪಿತಾಮಹ ಹಾಗೂ ಡಾ ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ಹಾಗೂ ಪ್ರಖ್ಯಾತ ವಚನ ಸಂಗೀತ ಗಾಯಕಿ ಎಂ. ಡಿ. ಪಲ್ಲವಿ ಇವರಿಗೆ ನೀಡಲಾಗುತ್ತಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಬಸವ ವೇದಿಕೆಯ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ತಿಳಿಸಿದ್ದಾರೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಜಗದ್ಗುರು ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ವಹಿಸುವರು. ಸಮಾರಂಭವನ್ನು ಉದ್ಘಾಟಿಸಿ “ಬಸವಶ್ರೀ” ಪ್ರಶಸ್ತಿಯನ್ನು ಗೃಹ ಸಚಿವರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಪ್ರದಾನ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಲೋಕಸಭಾ ಸದಸ್ಯರಾದ ಬಸವರಾಜ ಬೊಮ್ಮಾಯಿ ವಹಿಸಲಿದ್ದು, ‘ವಚನ ಜ್ಯೋತಿ’ ಕೃತಿಯನ್ನು ನಾಡಿನ ಕೈಗಾರಿಕಾ ಸಚಿವರಾದ ಸನ್ಮಾನ್ಯ ಎಂ. ಬಿ. ಪಾಟೀಲ್ ಲೋಕಾರ್ಪಣೆಗೊಳಿಸಲಿದ್ದಾರೆ. ಮತ್ತು “ವಚನ ಸಾಹಿತ್ಯ ಶೀ” ಪ್ರಶಸ್ತಿಯನ್ನು ಭಾರತ ಸರ್ಕಾರದ ಜನಶಕ್ತಿ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವರಾದ ವಿ. ಸೋಮಣ್ಣನವರು ಪ್ರಶಸ್ತಿಯನ್ನು ನೀಡಲಿದ್ದಾರೆ. ಈ ಸಮಾರಂಭದಲ್ಲಿ ಖ್ಯಾತ ಗಾಯಕಿ ಎಂ. ಡಿ. ಪಲ್ಲವಿ ಇವರಿಂದ ವಚನಗಾಯನ ಕಾರ್ಯಕ್ರಮ ನಡೆಯಲಿದೆ. ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ಗೌರವ ಸಲಹೆಗಾರರಾದ ನಾಡೋಜ ಗೊ. ರು. ಚನ್ನಬಸಪ್ಪನವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
Subscribe to Updates
Get the latest creative news from FooBar about art, design and business.
Previous Articleಮೈಟ್ ಕಾಲೇಜಿನ ಕಲಾವೈಭವದ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ