ಮಂಗಳೂರು : ಮಲ್ಲಿಕಟ್ಟೆಯಲ್ಲಿರುವ ನೂಪುರ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಅಕಾಡೆಮಿ ಆಯೋಜಿಸಿರುವ ಕುಮಾರಿ ಕಿಯಾರಾ ಆ್ಯಶ್ಲಿನ್ ಪಿಂಟೋ ಇವರ ಶಾಸ್ತ್ರೀಯ ನೃತ್ಯ ರಂಗಪ್ರವೇಶ ಕಾರ್ಯಕ್ರಮವನ್ನು ದಿನಾಂಕ 04 ಮೇ 2025ರಂದು ಸಂಜೆ 5-00 ಗಂಟೆಗೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೃತ್ಯಗುರು, ನೂಪುರ ಭಾರತೀಯ ಶಾಸ್ತ್ರೀಯ ನೃತ್ತ ಮತ್ತು ಸಂಗೀತ ಅಕಾಡೆಮಿಯ ನಾಟ್ಯ ವಿದುಷಿ ಸುಲೋಚನಾ ವಿ. ಭಟ್ ತಿಳಿಸಿದ್ದಾರೆ.
ಕಿಯಾರಾ ಇವರ ರಂಗಪ್ರವೇಶವು ಭರತನಾಟ್ಯ, ಕುಚಿಪುಡಿ, ಕಥಕ್ ಮತ್ತು ಮೋಹಿನಿ ಅಟ್ಟಂನಂತಹ ಶಾಸ್ತ್ರೀಯ ನೃತ್ಯ ಪ್ರಕಾರಗಳ ಮಿಶ್ರಣದೊಂದಿಗೆ ವಿಶಿಷ್ಟವಾಗಿ ನಡೆಯಲಿದೆ. ನಾಟ್ಯಾಚಾರ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸ್ವಸ್ತಿಕ ರಾಷ್ಟ್ರೀಯ ವ್ಯವಹಾರ ಶಾಲೆಯ ಪ್ರಾಂಶುಪಾಲೆ ಡಾ. ಮಾಲಿನಿ ಹೆಬ್ಬಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.