ಕಾಸರಗೋಡು : ಕಾಸರಗೋಡಿನ ಭರವಸೆಯ ಕವಯತ್ರಿ ಮೇಘಾ ಶಿವರಾಜ್ ಇವರ ಕವನ ಸಂಕಲನವನ್ನು ಕನ್ನಡ ಭವನದ ರೂವಾರಿಯಾಗಿರುವ ಸಂದ್ಯಾ ರಾಣಿ ಟೀಚರ್ ಇವರು ಕನ್ನಡ ಭವನ ಪ್ರಕಾಶದ ಮೂಲಕ ಕೃತಿ ಪ್ರಕಟಿಸಿದ್ದು, ದಿನಾಂಕ 27 ಏಪ್ರಿಲ್ 2025ರಂದು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ನಡೆದ ‘ಬೇಕಲ ರಾಮನಾಯಕ ಸ್ಮರಣಾಂಜಲಿ’ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಮಕ್ಷತ್ರಿಯ ಸಂಘಗಳ ಒಕ್ಕೂಟ ಗೌರವ ಅಧ್ಯಕ್ಷರಾಗಿರುವ ಡಾ. ರವೀಂದ್ರ ಜೆಪ್ಪು ಇವರು ರಾಮರಾಜ ಕ್ಷತ್ರಿಯ ಸೇವಾ ಸಂಘ ಕಾಸರಗೋಡು ಜಿಲ್ಲಾ ಅಧ್ಯಕ್ಷರಾಗಿರುವ ಶ್ರೀ ಕಮಲಾಕ್ಷ ಕಲ್ಲುಗದ್ದೆಯವರಿಗೆ ಪುಸ್ತಕ ನೀಡುವ ಮೂಲಕ ‘ಮೌನ ಮಾತಾದಾಗ’ ಕೃತಿ ಬಿಡುಗಡೆಗೊಳಿಸಲಾಯಿತು.
ಈ ಕೃತಿಗೆ ಮುನ್ನುಡಿ ಬರೆದ ಮಂಗಳೂರಿನ ಖ್ಯಾತ ಸಾಹಿತಿ, ಕವಿ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಇವರು ಕೃತಿ ಪರಿಚಯ ಮಾಡಿದರು. ವಿಶ್ವ ರಾಮಕ್ಷತ್ರಿಯ ಮಹಾಸಂಘದ ಅಧ್ಯಕ್ಷರೂ ಸಾಹಿತ್ಯ ಪರಿಚಾರಕರಾದ ಶ್ರೀ ಶಶಿಧರ್ ನಾಯ್ಕ್ ಬೆನ್ನುಡಿ ಬರೆದು ಲೇಖಕಿಯನ್ನು ಹರಸಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನಡ ಭವನ ಪ್ರಕಾಶನದ ಪ್ರಕಾಶಕಿ ಸಂದ್ಯಾ ರಾಣಿ ಟೀಚರ್, ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಕೊಡಗು ಕನ್ನಡ ಭವನ ಅಧ್ಯಕ್ಷ ಬೊಳ್ಳಿಜಿರ ಬಿ. ಅಯ್ಯಪ್ಪ, ಶುಭ ನುಡಿ ಬರೆದ ವಿರಾಜ್ ಅಡೂರ್, ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್, ಕ.ಸಾ.ಪ. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಸಾಹಿತಿ ಚಂದ್ರಹಾಸ ಎಂ.ಬಿ. ಚಿತ್ತಾರಿ, ಪ್ರಕಾಶ್ ಚಂದ್ರ ತೊಕ್ಕೊಟ್ಟು, ಪ್ರದೀಪ್ ಬೇಕಲ್, ರಾಜೇಶ್ ಕೋಟೆಕಣಿ ಮುಂತಾದವರು ಉಪಸ್ಥಿತರಿದ್ದರು.