ಮಂಗಳೂರು : ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಭಿವಂದನ ಮತ್ತು ‘ಕರ್ಮಯೋಗಿ’ ಬಿರುದು ಪ್ರದಾನ ಸಮಾರಂಭವನ್ನು ದಿನಾಂಕ 10 ಮೇ 2025ರಂದು ಸಂಜೆ 4-00 ಗಂಟೆಗೆ ಮಂಗಳೂರು ಪಿಲಿಕುಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಜೆ 4-00 ಗಂಟೆಗೆ ಶ್ರೀ ಲೋಕೇಶ್ ಸಂಪಿಗೆ ಇವರಿಂದ ಸುರ್ ಸಾಗರ್ ಫ್ಯೂಷನ್ ಬ್ಯಾಂಡ್, ಪುನರೂರು ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಮೆರವಣಿಗೆ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇವರು ವಹಿಸಲಿದ್ದು, ಖ್ಯಾತ ಸಾಹಿತಿ ಹಾಗೂ ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಇವರು ಅಭಿನಂದನ ನುಡಿಗಳನ್ನಾಡಲಿದ್ದಾರೆ.