ಬೆಂಗಳೂರು : ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ಬಸವ ಜಯಂತಿ ಅಂಗವಾಗಿ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ರಿಜಿಸ್ಟರ್ ಬೆಂಗಳೂರು ರಂಗವೈಭವ 2025 ಪ್ರಯುಕ್ತ ನಡೆಯುವ ‘ಕರುನಾಡ ಕಾಯಕ ಯೋಗಿ ಸದ್ಭಾವನ ಪ್ರಶಸ್ತಿಗೆ ಮಂಗಳೂರಿನ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ದಿನಾಂಕ 09 ಮೇ 2025ರಂದು ನಗರಬಾವಿ ಮಲ್ಲತಳ್ಳಿ ಕಲಾಗ್ರಾಮ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆಯಲಿದೆ. ಗೀತ ರಚನೆಗಾರರು ಹಾಗೂ ಸಂಗೀತ ಸಂಯೋಜಕರು, ನಿರ್ದೇಶಕರಾದ ಡಾ. ನಾಗೇಂದ್ರ ಪ್ರಸಾದ್ ಪ್ರಶಸ್ತಿ ಪ್ರಧಾನ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹದಳ ಹಾಗೂ ವಿಶ್ವಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ. ಪ್ರವೀಣ್ ಹಿರೇಮಠ ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ಮಂಜುನಾಥ್ ಮಟ್ಟು ಹೆಸರಾಂತ ಚಲನಚಿತ್ರ ತಾರೆ ಡಾ. ಭವ್ಯ ಇವರುಗಳು ಭಾಗವಹಿಸುವರು.