ಬೆಂಗಳೂರು : ಯಕ್ಷ ಸಂಜೀವಿನಿ ಟ್ರಸ್ಟ್ (ರಿ.) ಜಾಲಹಳ್ಳಿ ಬೆಂಗಳೂರು ಇವರಿಂದ ಪೌರಾಣಿಕ ಯಕ್ಷಗಾನ ಕಥಾ ಪ್ರಸಂಗ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನವನ್ನು ದಿನಾಂಕ 17 ಮೇ 2025ರಂದು ಸಂಜೆ 5-00 ಗಂಟೆಗೆ ಬೆಂಗಳೂರು ಆರ್.ಟಿ. ನಗರದ ಶ್ರೀ ವಿನಾಯಕ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿಮ್ಮೇಳದಲ್ಲಿ ಭಾಗವತರು – ಶ್ರೀ ಸುಬ್ರಾಯ ಹೆಬ್ಬಾರ್, ಮದ್ದಳೆ – ಶ್ರೀ ಸಂಪತ್ ಆಚಾರ್ಯ, ಚೆಂಡೆ – ಶ್ರೀ ಮನೋಜ್ ಆಚಾರ್ಯ ಹಾಗೂ ಮುಮ್ಮೇಳದಲ್ಲಿ ಬಾಲ ಗೋಪಾಲ – ಗಾನವಿ ಡಿ., ಬಾಲ ಗೋಪಾಲ/ಕುಬೇರ – ಐಸಿರಿ ಯು., ಸುದರ್ಶನ – ಪ್ರಶ್ಚಿಲ್ ಪಿ., ವಿಷ್ಣು – ಬಿ.ಕೆ. ವಿನುತಾ, ಲಕ್ಷ್ಮೀ – ಅನನ್ಯ ಕಿಣಿ, ದೇವೇಂದ್ರ – ವಿದ್ಯಾ ನಾಯ್ಕ್, ಅಗ್ನಿ – ದಿವ್ಯಾ ಎಂ.ಎನ್., ವರುಣ – ದಿಪ್ತಿ ಎಂ.ಎನ್., ಶತ್ರುಪ್ರಸೂದನನ ಮಂತ್ರಿ – ಶಶಿಕಲಾ ದಯಾನಂದ್, ಕುಶ – ಅಮೃತ್ ಎಂ. ಆಚಾಯ, ಲವ – ಕೌಸ್ತುಭ್ ಜಿ. ಉಡುಪ, ಶತ್ರುಘ್ನ – ಭಾಸ್ಕರ್ ಶೆಟ್ಟಿ, ಪುಷ್ಕಳ – ಲಾವಣ್ಯಲಕ್ಷ್ಮೀ ಆರ್ಿ., ದಮನ – ಲಾವಣ್ಯಶ್ರೀ ಎಸ್., ಸೀತೆ – ಪ್ರಗತಿ ಪೂಜಾರಿ, ವಾಲ್ಮೀಕಿ – ವಿದ್ಯಾ ನಾಯ್ಕ್, ನಿರ್ದೇಶನ ಹಾಗೂ ಶತ್ರುಪ್ರಸೂದನ ಮತ್ತು ಶ್ರೀರಾಮನಾಗಿ – ಸರೋಜ ಗೋಪಾಲ ಆಚಾರ್ ಸಹಕರಿಸಲಿದ್ದಾರೆ.