ಸುರತ್ಕಲ್ : ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಇದರ ‘ನಲ್ವತ್ತರ ನಲಿವು -11’ ಸರಣಿ ಕಾರ್ಯಕ್ರಮವನ್ನು ದಿನಾಂಕ 13 ಮೇ 2025ರಂದು ಸಂಜೆ 6-00 ಗಂಟೆಗೆ ಶ್ರೀ ನಾಟ್ಯಾಂಜಲಿ ಕಲಾ ಮಂದಿರ ಪಾರ್ವತಿ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ಗೌರವಾಧ್ಯಕ್ಷರಾದ ಕರ್ಮಯೋಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ವಹಿಸಲಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಗುರು ಶುಭಾ ಧನಂಜಯ್ ಇವರು ಉದ್ಘಾಟನೆ ಮಾಡಲಿದ್ದಾರೆ. ‘ಭರತನಾಟ್ಯ ಕಾರ್ಯಕ್ರಮದಲ್ಲಿ ಹೆಚ್ಚು ನೃತ್ಯಗಳು (ಲಯ ಪ್ರಧಾನದ್ದೇ / ಭಾವ ಪ್ರಧಾನದ್ದೇ) ಇದ್ದರೆ ಚಂದ’ ಎಂಬ ವಿಷಯದ ಬಗ್ಗೆ ನಡೆಯಲಿರುವ ಮಾತಿನ ಮಂಟಪದಲ್ಲಿ ವಿದುಷಿಯರಾದ ಸುಮಂಗಲಾ ರತ್ನಾಕರ ರಾವ್, ವಿದ್ಯಾಶ್ರೀ ರಾಧಾಕೃಷ್ಣ, ಭ್ರಮರಿ ಶಿವಪ್ರಕಾಶ್, ರಶ್ಮಿ ಉಡುಪ ಮತ್ತು ವಿದ್ಯಾ ಚಂದ್ರಶೇಖರ್ ಇವರುಗಳು ಭಾಗವಹಿಸಲಿದ್ದಾರೆ.