ಬೆಳಗಾವಿ : ರಂಗಸಂಪದ ಬೆಳಗಾವಿಯ ತಂಡದ ಹೊಸ ವರ್ಷದ ರಂಗ ಚಟುವಟಿಕೆಗಳನ್ನು ದಿನಾಂಕ 17 ಮತ್ತು 18 ಮೇ 2025ರಂದು ಸಂಜೆ 6-30 ಗಂಟೆಗೆ ಪ್ರಾರಂಭ ಮಾಡುತ್ತಿದ್ದು, ವಿಶ್ವಾವಸು ನಾಟಕ ಪ್ರಾರಂಭೋತ್ಸವವನ್ನು ಪರಮಪೂಜ್ಯ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿಯವರ ಅಮೃತ ಹಸ್ತದಿಂದ ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಉದ್ಘಾಟನೆಗೊಳ್ಳಲಿದೆ.
ದಿನಾಂಕ 17 ಮೇ 2025ರಂದು ಧಾತ್ರಿ ರಂಗಸಂಸ್ಥೆ ಸಿರಿಗೆರೆ ತಂಡದ ‘ಶ್ರೀ ಕೃಷ್ಣ ಸಂಧಾನ’ ನಗೆ ನಾಟಕವು ಭೀಮೇಶ ಎಚ್.ಎನ್. ದಾವಣಗೆರೆ ಇವರ ನಿರ್ದೇಶನದಲ್ಲಿ ಹಾಗೂ ದಿನಾಂಕ 18 ಮೇ 2025ರಂದು ಜಗದೀಶ ಆರ್. ಜಾಣೆ ಇವರ ನಿರ್ದೇಶನದಲ್ಲಿ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನಗೊಳ್ಳಲಿದೆ.
ಈ ಮೇಲಿನ ಪ್ರವೇಶ ಪತ್ರವನ್ನು ಕಳೆದ ವರ್ಷದ ಎಲ್ಲಾ ಸದಸ್ಯರಿಗೆ ಮತ್ತು ಈ ವರ್ಷ ಸದಸ್ಯತ್ವ ಪಡೆದವರಿಗೆ ಕಳಿಸುತ್ತಿದ್ದೇವೆ. ಈ ವರ್ಷ ಸದಸ್ಯತ್ವ ನವೀಕರಣ ಮಾಡದೇ ಇದ್ದವರಿಗೆ ಕೂಡ ಇದೊಂದು ಸಲ ಮಾತ್ರ ಕಳಿಸುತ್ತಿದ್ದೇವೆ. ನೀವು ಈ 2025-26ರ ಸದಸ್ಯತ್ವ ಇನ್ನೂ ನವೀಕರಣ ಮಾಡಿರದೇ ಇದ್ದಲ್ಲಿ ದಯವಿಟ್ಟು ಕೂಡಲೇ ಮಾಡಿ. ಈ ನಾಟಕದ ಪ್ರದರ್ಶನದ ವೇಳೆ ಕೂಡ ರಂಗಮಂದಿರದಲ್ಲಿ ನವೀಕರಣ ಮಾಡಬಹುದು. ಮುಂದಿನ ನಾಟಕ ಅಥವಾ ರಂಗಸಂಪದದ ಬೇರೆ ಕಾರ್ಯಕ್ರಮಗಳಿಗೆ ನವೀಕರಣ ಮಾಡದ ಸದಸ್ಯರಿಗೆ ಮಾಹಿತಿ ಮತ್ತು ಪ್ರವೇಶ ಪತ್ರ ಕಳಿಸಲಾಗುವದಿಲ್ಲ. ಆದ್ದರಿಂದ ಈ ಕೂಡಲೇ ನಿಮ್ಮ ಸದಸ್ಯತ್ವ ನವೀಕರಣ ಮಾಡಿ.