ಬೆಂಗಳೂರು : ಸಂಚಾರಿ ಥಿಯೇಟರ್ ಇದರ 20ನೇ ವರ್ಷದ ರಂಗಸಂಭ್ರಮದ ಪ್ರಯುಕ್ತ ಸಂಚಾರಿ ಸಡಗರದಲ್ಲಿ ‘ರೊಶೊಮನ್’ ನಾಟಕ ಪ್ರದರ್ಶನವನ್ನು ಮಂಗಳಾ ಎಸ್. ಇವರ ನಿರ್ದೇಶನದಲ್ಲಿ ದಿನಾಂಕ 17 ಮೇ 2025ರಂದು ಸಂಜೆ 3-30 ಮತ್ತು 7-30 ಗಂಟೆಗೆ ಬೆಂಗಳೂರಿನ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಪಾನಿನ ಬರಹಗಾರ ರುನೊಸುಕೆ ಅಕುತಗುವ ಇವರು ರಚಿಸಿದ ಕತೆಗಳನ್ನು ಆಧಾರವಾಗಿಟ್ಟುಕೊಂಡು ಅಕಿರಾ ಕುರುಸಾವಾ ಚಲನಚಿತ್ರವನ್ನಾಗಿಸಿದ ರಶೋಮನ್ ಚಲನಚಿತ್ರವನ್ನು ಆಧರಿಸಿ ಹಿಂದಿ ಲೇಖಕ ರಘುವೀರ್ ಸಾಹೆ ಹಿಂದಿ ನಾಟಕವನ್ನು ರಚಿಸಿದ್ದಾರೆ ಮತ್ತು ಅದನ್ನು ಕನ್ನಡಕ್ಕೆ ಎಸ್. ಮಾಲತಿ ಅನುವಾದಿಸಿದ್ದಾರೆ.