ಮಂಗಳೂರು : ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇದರ ಪಂಚಮ ಯಾನದಲ್ಲಿ ಪ್ರಪ್ರಥಮ ಬಾರಿಗೆ ದಿನಾಂಕ 17 ಮೇ 2025ರಿಂದ 22 ಮೇ 2025ರವರೆಗೆ ಬೆಂಗಳೂರಿನ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ನಿರ್ದೇಶನದಲ್ಲಿ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.
ದಿನಾಂಕ 17 ಮೇ 2025ರಂದು ಸಂಜೆ 3-00 ಗಂಟೆಗೆ ದಾಸರಹಳ್ಳಿ ಶ್ರೀ ಸೌಂದರ್ಯ ವೆಂಕಟರಮಣ ದೇವಸ್ಥಾನದಲ್ಲಿ ‘ಶ್ರೀ ಹರಿ ಲೀಲಾಮೃತ’, ದಿನಾಂಕ 18 ಮೇ 2025ರಂದು ಸಂಜೆ 4-00 ಗಂಟೆಗೆ ಕೊಡಿಗೆಹಳ್ಳಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ಕುಮಾರ ವಿಜಯ’, ದಿನಾಂಕ 19 ಮೇ 2025ರಂದು ಸಂಜೆ 5-00 ಗಂಟೆಗೆ ಯಲಹಂಕ ರಮಣಶ್ರೀ ಲೇಔಟ್ ನಲ್ಲಿ ‘ಶ್ರೀ ದೇವಿ ಮಹಾತ್ಮೆ’, ದಿನಾಂಕ 20 ಮೇ 2025ರಂದು ಸಂಜೆ 5-00 ಗಂಟೆಗೆ ಮಾಚೋಹಳ್ಳಿ ಶ್ರೀ ವಾಣಿ ಶಾಲೆಯಲ್ಲಿ ‘ಅಯೋಧ್ಯಾ ದೀಪ’, ದಿನಾಂಕ 21 ಮೇ 2025ರಂದು ಸಂಜೆ 5-00 ಗಂಟೆಗೆ ಮಾಚೋಹಳ್ಳಿ ಶ್ರೀ ವಾಣಿ ಶಾಲೆಯಲ್ಲಿ ‘ಶ್ರೀ ದೇವಿ ಮಹಾತ್ಮೆ’, ದಿನಾಂಕ 22 ಮೇ 2025ರಂದು ಸಂಜೆ 6-30 ಗಂಟೆಗೆ ಮೈಸೂರು ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.