ಸಿಂಧನೂರು : ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶನ ಕವಲಕ್ಕಿ, ಚಿತ್ತಾರ ಕಲಾ ಬಳಗ ಧಾರವಾಡ ಮತ್ತು ಮೇ ಸಾಹಿತ್ಯ ಮೇಳ ಬಳಗ ಸಿಂಧನೂರು ಇವುಗಳ ಸಂಯುಕ್ತ ಆಶ್ರಯದಲ್ಲಿ 11ನೇ ‘ಮೇ ಸಾಹಿತ್ಯ ಮೇಳ’ವನ್ನು ದಿನಾಂಕ 17 ಮತ್ತು 18 ಮೇ 2025ರಂದು ಸಿಂಧನೂರು ಸತ್ಯಾ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ.
ದಿನಾಂಕ 17 ಮೇ 2025ರಂದು ಬೆಳಗ್ಗೆ ಗಂಟೆ 09-30ಕ್ಕೆ ಬಸವರಾಜ ಕೊಡಗುಂಟಿ ಇವರು ಆಯ್ದಕ್ಕಿ ಲಕ್ಕಮ್ಮ – ಗುರು ಖಾದ್ರಿಪೀರ ಪುಸ್ತಕ ಮಳಿಗೆ ಹಾಗೂ ಸಾಜಿದ್ ವಾಜಿದ್ ಇವರು ಶಂಕರ ಗೌಡ ಬೆಟ್ಟದೂರು ಚಿತ್ರಕಲಾ ಪ್ರದರ್ಶನ ಮಳಿಗೆ ಉದ್ಘಾಟನೆ ಮಾಡಲಿದ್ದು, ಬಳಿಕ ಕಲಾ ತಂಡಗಳಿಂದ ಹೋರಾಟದ ಹಾಡುಗಳು ಪ್ರಸ್ತುತಗೊಳ್ಳಲಿದೆ. 10-30 ಗಂಟೆಗೆ ಉದ್ಘಟನಾ ಗೋಷ್ಠಿ, ಮಧ್ಯಾಹ್ನ 1-30 ಗಂಟೆಗೆ ಹೊಸಪೇಟೆಯ ಬಹುತ್ವ ಪ್ರತಿಷ್ಠಾನದವರಿಂದ ‘ನಾ ಯಾರು ?’ ರಂಗ ಪ್ರಸ್ತುತಿ, ಗೋಷ್ಠಿ 01ರಲ್ಲಿ ‘ಅಸಮಾನತೆ ಮತ್ತು ಸಂಘರ್ಷ : ಹೊರಳು ನೋಟ’, ಗೋಷ್ಠಿ 02ರಲ್ಲಿ ‘ದಮನದ ಸ್ವರೂಪಗಳು’, ಗೋಷ್ಠಿ 03ರಲ್ಲಿ ‘ಹೋರಾಟಗಾರ ಜೀವಗಳೊಂದಿಗೆ ಸಂವಾದ’, ಗೋಷ್ಠಿ 04ರಲ್ಲಿ ‘ನನ್ನ ಹಾಡು, ನನ್ನ ಬದುಕು’ ಎಂಬ ವಿಷಯಗಳ ಬಗ್ಗೆ ಸಂವಾದ ಹಾಗೂ ರಾತ್ರಿ ಗಂಟೆ 8-00ರಿಂದ ಕವಿಗೋಷ್ಠಿ 01 ನಡೆಯಲಿದೆ.
ದಿನಾಂಕ 18 ಮೇ 2025ರಂದು ಬೆಳಗ್ಗೆ ಗಂಟೆ 09-00ಕ್ಕೆ ಕವಿಗೋಷ್ಠಿ 02, ಗೋಷ್ಠಿ 05ರಲ್ಲಿ ‘ಅಭಿವೃದ್ಧಿಯ ಸತ್ಯ ಮಿಥ್ಯೆ’, ಗೋಷ್ಠಿ 06ರಲ್ಲಿ ‘ದಮನ – ಅನುಭವವಾಗಿ’, ಗೋಷ್ಠಿ 07ರಲ್ಲಿ ‘ಐಕ್ಯ ಚಳವಳಿ : ಯಾತಕ್ಕಾಗಿ, ಯಾರ ಜೊತೆ ?’ ಎಂಬ ವಿಷಯಗಳ ಬಗ್ಗೆ ಸಂವಾದ ಹಾಗೂ ಸಂಜೆ 4-00 ಗಂಟೆಗೆ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದೆ.