ಹುಬ್ಬಳ್ಳಿ : ಹುಬ್ಬಳ್ಳಿಯ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯು ‘ಕಾವ್ಯ ಪ್ರಶಸ್ತಿ’ ನೀಡಲು ಕವನ ಸಂಕಲನಗಳನ್ನು ಆಹ್ವಾನಿಸಿದೆ. ಸಂಕಲನವು 2023 ಹಾಗೂ 2024ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿರಬೇಕು. ಅನುವಾದಿತ ಕೃತಿ ಆಗಿರಬಾರದು. ಈ ಮೊದಲು ಯಾವುದೇ ಪ್ರಶಸ್ತಿಗಳನ್ನು ಪಡೆದಿರಬಾರದು. ಪ್ರಶಸ್ತಿಯು ರೂ.10,000/- ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.
ಸಂಕಲನದ ಎರಡು ಪ್ರತಿಗಳನ್ನು ದಿನಾಂಕ 10 ಜೂನ್ 2025ರೊಳಗೆ ‘ಕಾವ್ಯ ಪ್ರಶಸ್ತಿಗಾಗಿ’ ಎಂದು ನಮೂದಿಸಿ, ಎಂ.ಎ. ಸುಬ್ರಹ್ಮಣ್ಯ, ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ರಸ್ತೆ, ಹುಬ್ಬಳ್ಳಿ-580020 ಈ ವಿಳಾಸಕ್ಕೆ ಕಳುಹಿಸಬೇಕು. ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್‌ನಲ್ಲಿ ಹುಬ್ಬಳ್ಳಿಯಲ್ಲಿ ನಡೆಯಲಿದೆ.