ಮೈಸೂರು : ಮೈಸೂರಿನ ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಡಾ. ವಿಜಯಾ ದಬ್ಬೆಯವರ ಸ್ಮರಣಾರ್ಥ ವಿದ್ಯಾರ್ಥಿ, ಯುವಜನರಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಮತ್ತು ಕಿರಿಯ ಲೇಖಕಿಯರಿಗೆ ಆಯೋಜಿಸಿದ್ದ ಸಣ್ಣಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ಕವನ ಸ್ಪರ್ಧೆ ವಿಜೇತರು : ಕೆ.ಜಿ.ಎಫ್.ನ ಆರ್. ಬಾಲಾಜಿ ಇವರ ‘ಎಂಟರ ಮನೆಯೊಳಗೆ ಕುಂಟೆ ಬಿಲ್ಲೆಯ ಆಟ’ (ಪ್ರಥಮ), ಕೇರಳ ಕೇಂದ್ರೀಯ ವಿವಿಯ ಜೋತಿರ್ಲಕ್ಷ್ಮಿಯವರ ‘ಫಿಂಗರ್ ಪ್ರಿಂಟಿನಲ್ಲಿ ಅವಳ ವಿಶ್ವರೂಪ’ ಮತ್ತು ಬಂಟ್ವಾಳದ ಜಯಶ್ರೀ ಇಡ್ಕಿದು ಇವರ ‘ಬಾಡಿಗೆ ಕೋಣೆ’ (ಇಬ್ಬರಿಗೂ ದ್ವಿತೀಯ), ಕೊಳ್ಳೇಗಾಲ ಚಿನ್ನಪುರದ ರಶ್ಮಿ ಎಸ್. ನಾಯಕ್ ಇವರ ‘ಹೆಣ್ತನ ಶಾಪವೇ’ (ತೃತೀಯ) ಕವನಗಳು ಮೊದಲ ಮೂರು ಬಹುಮಾನ ಪಡೆದುಕೊಂಡಿವೆ.
ಕಥಾ ಸ್ಪರ್ಧೆ ವಿಜೇತರು : ಸಣ್ಣಕಥಾ ಸ್ಪರ್ಧೆಯಲ್ಲಿ ಬೆಂಗಳೂರಿನ ಪಲ್ಲವಿ ಎಡೆಯೂರು ಇವರ ‘ಯುರೋಪ್ಲೊಮೆಟ್ರಿ’ (ಪ್ರಥಮ), ರಾಮನಗರದ ವಿನುತ ಕೆ.ಆರ್. ಇವರ ‘ತಾಯಿ ಅಂದರೆ’ (ದ್ವಿತೀಯ) ಮತ್ತು ಮಾಲೂರಿನ ಡಾ. ಎಸ್. ಶಿಲ್ಪರವರ ‘ಬಾಯಿ ಬಣ್ಣ’ (ತೃತೀಯ) ಮೊದಲ ಮೂರು ಬಹುಮಾನ ಪಡೆದಿವೆ.
ಮೊದಲ ಮೂರು ಬಹುಮಾನ ಪಡೆದವರು ಮತ್ತು ತೀರ್ಪುಗಾರರ ಮೆಚ್ಚುಗೆ ಪಡೆದ ಎಲ್ಲಾರಿಗೆ ದಿನಾಂಕ 31 ಮೇ 2025ರಂದು ಮೈಸೂರಿನಲ್ಲಿ ಸಾಹಿತ್ಯ ಕಮ್ಮಟವನ್ನು ಏರ್ಪಡಿಸಲಾಗಿದ್ದು, ಇದೇ ಸಂದರ್ಭದಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದು ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ತಿಳಿಸಿದ್ದಾರೆ.