ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ‘ಡಾ. ನಳಿನಿ ಮೂರ್ತಿ ದತ್ತಿ ಪ್ರಶಸ್ತಿ’ಗೆ ವಿಜ್ಞಾನ ಕೃತಿಗಳನ್ನು ಲೇಖಕಿಯರಿಂದ ಆಹ್ವಾನಿಸಲಾಗಿದೆ. ಖ್ಯಾತ ವಿಜ್ಞಾನ ಲೇಖಕಿ ದಿವಂಗತ ಡಾ. ನಳಿನಿ ಮೂರ್ತಿ ಹೆಸರಿನಲ್ಲಿ ಅವರ ಪತಿ ಎಸ್. ನರಸಿಂಹ ಮೂರ್ತಿಯವರು ಕರ್ನಾಟಕ ಲೇಖಕಿಯರ ಸಂಘದಲ್ಲಿ ದತ್ತಿನಿಧಿಯನ್ನು ಸ್ಥಾಪಿಸಿದ್ದು, ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ ಎಂದು ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪ ತಿಳಿಸಿದ್ದಾರೆ.
ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳು ಹಾಗೂ ವೈಜ್ಞಾನಿಕ ಕತೆ, ಕಾದಂಬರಿ ಹಾಗೂ ಸಂಕೀರ್ಣ (ವೈದ್ಯಕೀಯ/ ತಂತ್ರಜ್ಞಾನ/ ಕೃಷಿ ವಿಜ್ಞಾನ/ ಪರಿಸರ ವಿಜ್ಞಾನ)ಕ್ಕೆ ಸಂಬಂಧಿಸಿದ ಕೃತಿಗಳನ್ನು ಲೇಖಕಿಯರಿಂದ ಆಹ್ವಾನಿಸಲಾಗಿದ್ದು, ಜನವರಿ 2024ರಿಂದ ಡಿಸೆಂಬರ್ 2024ರ ಅವಧಿಯಲ್ಲಿ ಪ್ರಕಟಗೊಂಡಿರಬೇಕು, ಕೃತಿಗಳು ಸ್ವತಂತ್ರವಾಗಿದ್ದು, ಅನುವಾದ ಕೃತಿಗಳನ್ನು ಪರಿಗಣಿಸುವುದಿಲ್ಲ. ಮೂರು ಪ್ರತಿಗಳನ್ನು, ಕರ್ನಾಟಕ ಲೇಖಕಿಯರ ಸಂಘ, ಫ್ಲಾಟ್ ನಂಬ್ರ 206, ವಿಜಯ ಮಾನ್ಷನ್, 2ನೆಯ ಮಹಡಿ, 2ನೆಯ ಮುಖ್ಯರಸ್ತೆ, 2ನೆಯ ತಿರುವು, ಚಾಮರಾಜಪೇಟೆ, ಬೆಂಗಳೂರು – 560018 ಇಲ್ಲಿಗೆ ಕಳುಹಿಸಬೇಕು. ಕೊನೆಯ ದಿನಾಂಕ 31 ಮೇ 2025 ಆಗಿದ್ದು, ತಡವಾಗಿ ಬಂದ ಕೃತಿಗಳನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗೆ – 9480051222, 8073765665 ಸಂಖ್ಯೆಯನ್ನು ಸಂಪರ್ಕಿಸಬಹುದು.