ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣಮಠ ಇವುಗಳ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಯುವ ಸಂಗೀತೋತ್ಸವ 2025’ವನ್ನು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ದಿನಾಂಕ 25 ಮೇ 2025ರಂದು ಆಯೋಜಿಸಲಾಗಿದೆ.
ಬೆಳಗ್ಗೆ ಗಂಟೆ 10-00ರಿಂದ ಕಾಸರಗೋಡಿನ ಕುಮಾರಿ ಅನ್ವಿತಾ ತಲ್ಪನಾಜೆ ಹಾಗೂ 11-45 ಗಂಟೆಗೆ ಸುರತ್ಕಲ್ಲಿನ ಕುಮಾರಿ ಸುಧೀಕ್ಷಾ ಆರ್. ಇವರ ಹಾಡುಗಾರಿಕೆಗೆ ಮಂಗಳೂರಿನ ಕುಮಾರಿ ಧನಶ್ರೀ ಶಬರಾಯ ವಯೋಲಿನ್ ಮತ್ತು ಕಾಸರಗೋಡಿನ ಕೌಶಿಕ್ ರಾಮಕೃಷ್ಣನ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಮಧ್ಯಾಹ್ನ 2-00 ಗಂಟೆಗೆ ಶೃಂಗೇರಿಯ ಸುಧನ್ವ ಆರ್. ಮತ್ತು ಸತ್ಯಪ್ರಮೋದ ಎಚ್.ವಿ. ಇವರ ಹಾಡುಗಾರಿಕೆಗೆ ಮಂಗಳೂರಿನ ಗೌತಮ್ ಭಟ್ ಪಿ.ಜಿ. ವಯೋಲಿನ್ ಮತ್ತು ಮಂಗಳೂರಿನ ಜಿ.ಎನ್. ಕೃಷ್ಣಪವನ್ ಕುಮಾರ್ ಮೃದಂಗದಲ್ಲಿ ಸಾಥ್ ನೀಡಲಿದ್ದಾರೆ. 4-30 ಗಂಟೆಗೆ ತಿರುವನಂತಪುರಂ ಎಸ್. ಮಹಾದೇವನ್ ಇವರ ಹಾಡುಗಾರಿಕೆಗೆ ಬೆಂಗಳೂರಿನ ಎಂ. ವಿಶ್ವಜಿತ್ ವಯೋಲಿನ್ ಮತ್ತು ಕೊಚ್ಚಿಯ ಕೃಪಾಲ್ ಸಾಯಿರಾಮ್ ಮೃದಂಗದಲ್ಲಿ ಸಹಕರಿಸಲಿದ್ದಾರೆ.