ಮಂಡ್ಯ : ಶ್ರೀ ಲಕ್ಷ್ಮೀನಾರಾಯಣ ದೇವರ ನೂತನ ಮೂರ್ತಿ ಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ದಿನಾಂಕ 25 ಮತ್ತು 26 ಮೇ 2025ರಂದು ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.
ದಿನಾಂಕ 25 ಮೇ 2025ರಂದು ರಾತ್ರಿ 10-00 ಗಂಟೆಗೆ ಸ್ಥಳೀಯ ಕಲಾವಿದರಿಂದ ಆರ್.ಟಿ. ಹೆಗಡೆ ತೀರ್ಥಗಾನ ಇವರ ನಿರ್ದೇಶನದಲ್ಲಿ ‘ವೃದ್ಧಾಶ್ರಮ’ ಕಿರು ನಾಟಕ ಪ್ರದರ್ಶನ ಹಾಗೂ ದಿನಾಂಕ 26 ಮೇ 2025ರಂದು ರಾತ್ರಿ 8-30 ಗಂಟೆಗೆ ವಿದುಷಿ ಜಯಶ್ರೀ ಹೆಗಡೆ, ವಿದುಷಿ ಅನುರಾಧಾ ಹೆಗಡೆ ಹಾಗೂ ವಿದ್ಯಾರ್ಥಿಗಳಿಂದ ‘ನೃತ್ಯ ನಮನ’ ಮತ್ತು 9-30 ಗಂಟೆಗೆ ‘ದಕ್ಷಯಜ್ಞ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.