ನಂದಳಿಕೆ : ವಿಶಾಲ ಯಕ್ಷ ಕಲಾ ಬಳಗ ನಂದಳಿಕೆ ಕಾರ್ಕಳ ತಾಲೂಕು ಇದರ ವತಿಯಿಂದ ಹಮ್ಮಿಕೊಂಡ ‘ತಾಳಮದ್ದಳೆ ಜ್ಞಾನಯಜ್ಞ’ ಕಾರ್ಯಕ್ರಮವು ದಿನಾಂಕ 26 ಮೇ 2025ರಂದು ಬೆಳಿಗ್ಗೆ 9-30 ಗಂಟೆಗೆ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಪ್ರಸಂಗ ಸಾಹಿತ್ಯ ‘ಸುಧಾಮ ಚರಿತ್ರೆ’ಯಲ್ಲಿ ಭಾಗವತರಾಗಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಹಿಮ್ಮೇಳದಲ್ಲಿ ಲಕ್ಷ್ಮೀನಾರಾಯಣ ಹೊಳ್ಳ ಕೃಷ್ಣಾಪುರ, ಸ್ಕಂಧರಾಜ ಮಯ್ಯ ವರ್ಕಾಡಿ, ಕುಮಾರ ಮಯ್ಯ ವರ್ಕಾಡಿ ಹಾಗೂ ಅರ್ಥಗಾರಿಕೆಯಲ್ಲಿ ಡಾ. ವಾದಿರಾಜ ಕಲ್ಲೂರಾಯ, ಸುಬ್ರಹ್ಮಣ್ಯ ಬೈಪಾಡಿತ್ತಾಯ ಮತ್ತು ಶಾಂತಾ ಬೈಪಾಡಿತ್ತಾಯ ಸಹಕರಿಸಲಿದ್ದಾರೆ.