ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪತ್ತಾನಜೆ ತಾಳಮದ್ದಳೆಯು ದಿನಾಂಕ 24 ಮೇ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ‘ಜಾಂಬವತಿ ಕಲ್ಯಾಣ’ದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಆನಂದಸವಣೂರು, ಮುರಳೀಧರ ಕಲ್ಲೂರಾಯ, ಪರೀಕ್ಷಿತ್ ಹಂದ್ರಟ್ಟ, ಸಮರ್ಥ ವಿಷ್ಣು ಈಶ್ವರ ಮಂಗಲ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ಕೃಷ್ಣ (ಭಾಸ್ಕರ್ ಬಾರ್ಯ ಮತ್ತು ಗುಡ್ಡಪ್ಪ ಬಲ್ಯ), ಬಲರಾಮ (ಹರಿಣಾಕ್ಷಿ ಜೆ. ಶೆಟ್ಟಿ ಮತ್ತು ಅಚ್ಯುತ ಪಾಂಗಣ್ಣಾಯ ಕೋಡಿಬೈಲು), ಜಾಂಬವ (ಗುಂಡ್ಯಡ್ಕ ಈಶ್ವರ ಭಟ್), ನಾರದ (ಭಾರತೀ ರೈ ಅರಿಯಡ್ಕ), ಜಾಂಬವತಿ (ಪ್ರೇಮ ಲತಾ ರಾವ್) ಸಹಕರಿಸಿದರು. ಜೂನ್ ಒಂದರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ‘ಪಟ್ಲ ಸಂಭ್ರಮದ ದಶಮಾನೋತ್ಸವ’ದ ಆಮಂತ್ರಣ ಪತ್ರಿಕೆಯನ್ನು ಪುತ್ತೂರು ಘಟಕದ ಪದಾಧಿಕಾರಿಗಳು ಸಂಘದ ಸದಸ್ಯರಿಗೆ ನೀಡಿ ಆಮಂತ್ರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ, ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಪ್ರೇಮಲತಾ ರಾವ್ ವಂದಿಸಿ, ಹರ್ಷ ಪುಣಚ ಪ್ರಾಯೋಜಿಸಿದ್ದರು.