ಪುತ್ತೂರು : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯ, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಹದಿನೇಳನೇ ಆವೃತ್ತಿಯ ವಿವೇಕಸ್ಮೃತಿ ಉಪನ್ಯಾಸ ಮಾಲಿಕೆ ದಿನಾಂಕ 12 ಜೂನ್ 2025ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮನಮೋಹನ್ ಎಂ. ಸಮಾಜದಲ್ಲಿ ಇರುವ ಸ್ಥಾನಮಾನಗಳನ್ನು ತ್ಯಜಿಸಿ, ಶ್ರೀಮಂತಿಕೆಯನ್ನು ಬಿಟ್ಟು ಹೊರಬಂದಾಗ ಜೀವನದ ಅನುಭವ ಸಿಗುತ್ತದೆ. ಆತ್ಮ ಸಾಕ್ಷಾತ್ಕಾರವಾದಾಗ ನಿರ್ಧಾರಗಳು ಗಟ್ಟಿಯಾಗುತ್ತದೆ. ಭ್ರಮೆಗಳಿಂದ ಹೊರಬಂದಾಗ, ಬಂಧಗಳನ್ನು ತ್ಯಜಿಸಿದಾಗ ನಾವು ಭಯಮುಕ್ತರಾಗುವ ಮೂಲಕ ಆತ್ಮ ಸಾಕ್ಷಾತ್ಕಾರವಾಗುತ್ತದೆ ಎಂಬುದನ್ನು ಸ್ವಾಮಿ ವಿವೇಕಾನಂದರು ನಿರೂಪಿಸಿ ತೋರಿಸಿದ್ದಾರೆ. ಅವರ ಕವನಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ” ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಧರ್ ನಾಯ್ಕ್ ಮಾತನಾಡಿ “ವಿವೇಕಾನಂದರ ಕಾವ್ಯಾತ್ಮಕ ವಿಶ್ಲೇಷಣೆಗಳಲ್ಲಿರುವಂತೆ ನಾವೆಲ್ಲರೂ ಕರ್ತವ್ಯತತ್ಪರರಾಗಬೇಕಿದೆ” ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕಿ ರವಿಕಲಾ ಉಪಸ್ಥಿತರಿದ್ದರು.
ಡಾ. ವಿಜಯಸರಸ್ವತಿ ಸ್ವಾಗತಿಸಿ, ಸ್ವಾತಿ ಎನ್. ನಿರೂಪಿಸಿ, ಡಾ. ವಿದ್ಯಾ ಎಸ್. ವಂದಿಸಿದರು.
Subscribe to Updates
Get the latest creative news from FooBar about art, design and business.
Next Article ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಸಂಗೀತ ಕಛೇರಿ’ | ಜೂನ್ 15