Subscribe to Updates

    Get the latest creative news from FooBar about art, design and business.

    What's Hot

    ಕೊಲ್ಯದ ನಾಟ್ಯನಿಕೇತನದಲ್ಲಿ ‘ನಾಟ್ಯಮೋಹನ ನವತ್ಯುತ್ಸವ’ – 18 | ಜೂನ್ 18

    June 17, 2025

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ‘ಪೆನ್ ಟು ಪ್ರೀಮಿಯರ್’ನಿಂದ ಮಹಿಳೆಯರಿಗಾಗಿ ಸಣ್ಣ ಕಥೆಗಳ ಸ್ಪರ್ಧೆ | ಆಗಸ್ಟ್ 31 ಕೊನೆಯ ದಿನ

    June 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ‘ಕೆ.ಎಂ.ಎ. ದಫ್ ಮುಟ್ಟ್’ ತಂಡ ಹಾಗೂ ಪ್ರದರ್ಶನ
    Cultural

    ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ‘ಕೆ.ಎಂ.ಎ. ದಫ್ ಮುಟ್ಟ್’ ತಂಡ ಹಾಗೂ ಪ್ರದರ್ಶನ

    June 17, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪೊನ್ನಂಪೇಟೆ : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧೀನದಲ್ಲಿ ‘ಕೆ.ಎಂ.ಎ. ದಫ್ ಮುಟ್ಟ್ (ರಾತೀಬ್)’ ತಂಡವನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದ್ದು, ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ದಿನಾಂಕ 13 ಜೂನ್ 2025ರಂದು ದಫ್ ಮುಟ್ಟ್ ಪ್ರದರ್ಶನವನ್ನು ಪ್ರಸ್ತುತಪಡಿಸಿದೆ. ಈ ಮೂಲಕ ಕೊಡವ ಮುಸ್ಲಿಮರ ಸಾಂಪ್ರದಾಯಿಕ ಧಾರ್ಮಿಕ ಕಲೆಯನ್ನು ಬೆಂಗಳೂರು ದೂರದರ್ಶನ ಚಂದನ ವಾಹಿನಿ ದಾಖಲೀಕರಣಗೊಳಿಸಿತು.

    ಕೊಡವ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಧಾರ್ಮಿಕ ಕಲೆಯಾದ ‘ದಫ್ ಮುಟ್ಟ್ ‘ ಅನ್ನು ಮತ್ತಷ್ಟು ಪ್ರೋತ್ಸಾಹಿಸಿ ಅದರ ಅಸ್ತಿತ್ವವನ್ನು ಉಳಿಸಿ ಬೆಳೆಸುವ ಹಿನ್ನೆಲೆಯಲ್ಲಿ ಈ ತಂಡವನ್ನು ರಚಿಸಲಾಗಿದ್ದು, ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿದ ‘ಕೆ.ಎಂ.ಎ. ದಫ್ ಮುಟ್ಟ್’ ತಂಡ ದೂರದರ್ಶನದ ಅತ್ಯಾಧುನಿಕ ಸ್ಟುಡಿಯೋದಲ್ಲಿ ಈ ಕಲೆಯನ್ನು ಎರಡು ಗಂಟೆಗಳ ಕಾಲ ಪ್ರದರ್ಶಿಸಿತು. ಈ ಸಂದರ್ಭ ಮಾತನಾಡಿದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಸೂಫಿ ಹಾಜಿ, “ಧೀರತ್ವ ತೋರಿದ ಹುತಾತ್ಮ ಸೂಫಿವರ್ಯರನ್ನು ಸ್ತುತಿಗೀತೆಗಳ ಮೂಲಕ ಸ್ಮರಿಸುವ ಸೂಫಿ ಸಾಹಿತ್ಯದ ಪ್ರಮುಖ ಭಾಗವಾಗಿರುವ ದಫ್ ಮುಟ್ಟ್ ಕೊಡವ ಮುಸ್ಲಿಂ ಸಮುದಾಯದಲ್ಲಿ ಜನಪ್ರಿಯವಾಗಿರುವ ಒಂದು ಕಲಾ ಪ್ರಕಾರವಾಗಿದೆ. ಇದನ್ನು ಹಬ್ಬಗಳಲ್ಲಿ, ಮಸೀದಿಗಳಿಗೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳಲ್ಲಿ ಮತ್ತು ಗಣ್ಯರನ್ನು ಸ್ವಾಗತಿಸುವ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಕೊಡವ ಮುಸ್ಲಿಮರು ನೆಲೆಸಿರುವ ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಈ ದಫ್ ಮುಟ್ಟ್ ತಂಡ ಸಕ್ರಿಯವಾಗಿದೆ. ಅಲ್ಲದೆ ಪ್ರತಿ ತಿಂಗಳು ಮನೆಗಳಲ್ಲೂ ತಮ್ಮ ಧಾರ್ಮಿಕತೆಯ ಭಾಗವಾಗಿ ಇದನ್ನು ಪ್ರದರ್ಶಿಸಲಾಗುತ್ತದೆ. ದಫ್ ಮುಟ್ಟಿನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸಮುದಾಯದ ಹಿರಿಯರ ಪಾತ್ರ ಅಪಾರವಾದದ್ದು ಎಂದು ವಿವರಿಸಿದರಲ್ಲದೆ, ಭಕ್ತಿ ಪೂರ್ವಕವಾಗಿ ಗೌರವಿಸಲ್ಪಡುವ ಈ ಕಲಾ ಪ್ರಕಾರವನ್ನು ಬೆಂಗಳೂರು ದೂರದರ್ಶನ ಕೇಂದ್ರ ದಾಖಲೀಕರಣಗೊಳಿಸಿದ್ದು, ಈ ಕಲೆಗೆ ದೊರೆತ ಮತ್ತೊಂದು ರೀತಿಯ ಪ್ರೋತ್ಸಾಹವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕೆ.ಎಂ.ಎ. ಸ್ಥಾಪಕಾಧ್ಯಕ್ಷ ಕುವೇಂಡ ವೈ. ಹಂಝತುಲ್ಲಾ ಮಾತನಾಡಿ, “ದಫ್ ಮುಟ್ಟ್ ಕಲಾ ಪ್ರಾಕಾರವು ಸಾಂಪ್ರದಾಯಿಕತೆ, ಧಾರ್ಮಿಕತೆ ಮತ್ತು ಜನಪದೀಯ ಸತ್ವ ಹೊಂದಿರುವ ವಿಶೇಷವಾದ ಪಾಲನೆಯಾಗಿದೆ. ಮಾನವೀಯ ಮೌಲ್ಯದ ಸಂದೇಶ ಸಾರುವ ಇದರ ಸಾಹಿತ್ಯಕ್ಕೂ ವಿಶೇಷವಾದ ಸ್ಥಾನಮಾನವಿದೆ. ಈ ಕಲೆಗೆ ದೂರದರ್ಶನ ಮನ್ನಣೆ ನೀಡಿರುವುದು ಇದರ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದರು.

    ದಫ್ ತಂಡದ ಖಲ್ಫದಾದ (ತಂಡದ ನಾಯಕ) ಕೂತಂಬಟ್ಟೀರ ಹುಸೈನ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಪ್ರಸ್ತುತ ಪಡಿಸಿದ ತಂಡದಲ್ಲಿ ಕೋಳುಮಂಡ ರಫೀಕ್, ದುದ್ದಿಯಂಡ ಸಿರಾಜುದ್ದೀನ್, ಕೂತಂಬಟ್ಟೀರ ಸಾದಲಿ, ಪುಡಿಯಂಡ ಇಸ್ಮಾಯಿಲ್, ತುತ್ತಿಯಂಡ ಬಾರಿಕೆ ಹಸೀನಾರ್, ಕೂತಂಬಟ್ಟೀರ ರಶೀದ್, ಪುಡಿಯಂಡ ಅನೀಶ್, ಕೂತಂಬಟ್ಟೀರ ಸಮೀರ್, ಕೋಳುಮಂಡ ಮೊಹ್ಸೀನ್ ಮತ್ತು ಕನ್ನಡಿಯಂಡ ಶರ್ಮಿದ್ ಇದ್ದರು. ಕಾರ್ಯಕ್ರಮದಲ್ಲಿ ಕೆ.ಎಂ.ಎ. ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ನಿರ್ದೇಶಕರುಗಳಾದ ಚಿಮ್ಮಿಚ್ಚಿರ ಇಬ್ರಾಹಿಂ (ಉಮ್ಮಣಿ) ಹಾಜಿ, ಅಲೀರ ಬಿ. ಅಬ್ದುಲ್ಲಾ, ಅಲೀರ ಹೆಚ್. ಅಬ್ದುಲ್ ಲತೀಫ್, ಕಿಕ್ಕರೆ ಮಹಮ್ಮದ್, ಆಲೀರ ಎಂ. ರಶೀದ್, ಕುಂಡಂಡ ರಜ್ಹಾಕ್ ಮೊದಲಾದವರಿದ್ದರು. ಕೆ.ಎಂ.ಎ. ದಫ್ ರಾತೀಬ್ ತಂಡದ ‘ದಫ್ ಮುಟ್ಟ್’ ಕಾರ್ಯಕ್ರಮ ಶೀಘ್ರದಲ್ಲೇ ಬೆಂಗಳೂರು ದೂರದರ್ಶನ ಕೇಂದ್ರದ ‘ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.

    baikady Cultural dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಡಾ. ಸದಾನಂದ ಪೆರ್ಲಗೆ ನಾಡೋಜ ಡಾ.ಕಯ್ಯಾರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
    Next Article ಉದ್ಘಾಟನೆಗೊಂಡ ಪಣಂಬೂರು ವೆಂಕಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ
    roovari

    Add Comment Cancel Reply


    Related Posts

    ಕೊಲ್ಯದ ನಾಟ್ಯನಿಕೇತನದಲ್ಲಿ ‘ನಾಟ್ಯಮೋಹನ ನವತ್ಯುತ್ಸವ’ – 18 | ಜೂನ್ 18

    June 17, 2025

    ವಿಶೇಷ ಲೇಖನ – ಶಿಕ್ಷಣ ತಜ್ಞ, ಸಂಸ್ಕೃತಿ ಚಿಂತಕ ಡಾ. ಜಿ. ರಾಮಕೃಷ್ಣ  

    June 17, 2025

    ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ಗೌರವ ಸಲಹೆಗಾರರಾಗಿ ದೀಪಕ್ ಪೆರ್ಮುದೆ ಆಯ್ಕೆ

    June 17, 2025

    ಕವನ | ಅನುಬಂಧ

    June 17, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.