ಮಲೆನಾಡಿನ ಭೂರಮೆ ಶೃಂಗಾರ
ಉಳುವಾ ರೈತನ ಕನಸಿನ ಮಂದಾರ
ಕಾಣಲು ಎಂಥಾ ಸುಂದರ ತೋಟ
ನಯನ ಮನೋಹರ ನೋಟ
ಎಲ್ಲಿ ನೋಡಿದರಲ್ಲಿ ಹಸಿರಿನ ವನಸಿರಿ
ಬಾನೆತ್ತರ ಬೆಳೆದು ನಿಂತ ಉನ್ನತ ಗಿರಿ
ವೈವಿದ್ಯಮಯ ಗಿಡ ಮರದ ಸೊಬಗು
ಅಲ್ಲಲ್ಲಿ ರವಿಯ ಕಿರಣದ ಮಿನುಗು
ಜುಳು ಜುಳು ಹರಿಯುವ ನೀರಿನ ಝರಿ
ಧವಳ ಸೀರೆಯುಟ್ಟ ಬಳುಕುವ ನಾರಿ
ಹಸಿರು ಮಾನವಗೆ ಕೊಡುವುದು ಉಸಿರು
ಪರಿಸರ ವೈಭವ ಮೆರೆಯುವ ಹಸಿರು
ಜೀವದಾತೆ ಜನ್ಮದಾತೆ ನಮ್ಮ ದೇವತೆ
ಮನುಜ ಕುಲದ ದೈವ ಶಕ್ತಿ ಶಾಂತಿದಾತೆ
ಪಶು ಪಕ್ಷಿ ಖಗ ಮೃಗಗಳ ಸಂಕುಲ ಬೀಡು
ಔಷದ ಗಿಡ ಮೂಲಿಕೆಗಳ ಆಗರ ನಾಡು
ಜೀವಿಸಲು ಬೇಕಾದ ಚಿರ ಸಂಪದ
ಶುಕ ಪಿಕಗಳ ಉಲಿತದ ಉನ್ಮಾದ
ಪ್ರಕೃತಿಯ ಮಡಿಲಲ್ಲಿ ಶಿಶುವು ನಾನು
ಜೋಗುಳ ಹಾಡಿ ಮಲಗಿಸೊ ತಾಯಿ ನೀನು
ಮನೆಗೊಂದು ಗಿಡ ಇರಲು ಜೀವನ ಸುಗಮ
ಆರೋಗ್ಯ ರಕ್ಷಣೆಗೆ ಇದು ಸಾಧನ ತಪ್ಪದೇ ಗಿಡನೆಡಿ
ವಿಮಲಾ ಭಾಗ್ವತ್, ಸಿರ್ಸಿ ಉತ್ತರ ಕನ್ನಡ