ಕಾಸರಗೋಡು : ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ನೂತನ ಗೌರವ ಸಲಹೆಗಾರರಾಗಿ ಮಂಗಳೂರಿನ ಕಲಾ, ಸಾಹಿತ್ಯ, ಸಾಂಸ್ಕೃತಿಕ ಸಂಘಟಕ ದೀಪಕ್ ಪೆರ್ಮುದೆ, ಮಂಗಳೂರು ಇವರನ್ನು ಸಮಿತಿಯು ಸರ್ವಾನುಮತದಿಂದ ಆಯ್ಕೆಗೊಳಿಸಿದೆ.
ಮಂಗಳೂರು ಪರಿಸರದ ವಿವಿಧ ಸಂಘ -ಸಂಸ್ಥೆ, ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು ಗ್ರಾಮ ಪಂಚಾಯತ್ ಪೆರ್ಮುದೆ ಇದರ ಮಾಜಿ ಸದಸ್ಯರು. ಪೆರ್ಮುದೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರೂ ಆಗಿರುವ ಶ್ರೀಯುತರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಚೇಳ್ಯಾರು- ಮದ್ಯ – ಕೊಡಿಪಾಡಿ, ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಕಾಟಿಪಳ್ಳ – ಕೃಷ್ಣಪುರ ಇದರ ಮಾಜಿ ಅಧ್ಯಕ್ಷರಾಗಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಇದರ ಸದಸ್ಯರೂ ಆಗಿದ್ದಾರೆ.
ಶ್ರೀ ಶಾರದಾ ಕಲಾ ಪ್ರಕಾಶನ(ರಿ.)ದ ಅದ್ಯಕ್ಷರು ಸಂಸ್ಥಾಪಕರಾಗಿರುವ ಇವರು ಶ್ರೀ ಶಾರದಾ ಯಕ್ಷಗಾನ ಮಂಡಳಿ, ಪೆರ್ಮುದೆ ಇದರ ಉಪಾಧ್ಯಕ್ಷರಾಗಿ ಅತ್ಯುತ್ತಮ ಕಾರ್ಯ ನಡೆಸುತ್ತಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜನಪದ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.
Subscribe to Updates
Get the latest creative news from FooBar about art, design and business.
ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಇದರ ಗೌರವ ಸಲಹೆಗಾರರಾಗಿ ದೀಪಕ್ ಪೆರ್ಮುದೆ ಆಯ್ಕೆ
No Comments1 Min Read
Previous Articleಕವನ | ಅನುಬಂಧ