13 ಏಪ್ರಿಲ್ 2023, ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪ್ರಖ್ಯಾತ ಪ್ರಸಾದ್ ಆರ್ಟ್ ಗ್ಯಾಲರಿಯ ಪ್ರಸಾದ್ ಚಿತ್ರಕಲಾ ಶಾಲೆ, ಬಲ್ಲಾಳ್ ಭಾಗ್, ಎಂ.ಜಿ.ರೋಡ್. ಇದರ ನಿರ್ದೇಶಕರಾದಂತಹ ಶ್ರೀಯುತ ಕೋಟಿ ಪ್ರಸಾದ್ ಆಳ್ವ ಅವರು ಸುಮಾರು 30 ವರ್ಷಗಳ ಕಾಲ ಖಾಸಗಿಯಾಗಿ ತಮ್ಮ ಸ್ವಂತ ಹಣದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಯಾವುದೇ ರೀತಿಯ ಸರ್ಕಾರದ ಅನುದಾನವಾಗಲಿ ಇರುವುದಿಲ್ಲ. ಕೇವಲ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಆಧಾರಿತವಾಗಿ ಚಿತ್ರಕಲೆಯ ವಿಷಯವನ್ನು ಒಳಗೊಂಡಿರುವಂತೆ ಪ್ರತಿ ವರ್ಷವೂ ವಾರ್ಷಿಕ ಶಿಬಿರಗಳು ಶಾಲೆಯ ಆವರಣದಲ್ಲಿ ನಡೆಯುತ್ತಿರುತ್ತದೆ. 2023 ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪರಿಸರದ ಮುಕ್ತ ವಾತಾವರಣದಲ್ಲಿ ಮಕ್ಕಳ ಮಾನಸಿಕ, ಬೌದ್ಧಿಕ, ಕ್ರಿಯಾತ್ಮಕ ಚಟುವಟಿಕೆಗಳ ಬೆಳವಣಿಗೆಗೆ ಪೂರಕವಾಗಿ ಬೇಸಿಕ್, ಪೇಪರ್ ಕ್ರಾಫ್ಟ್, ಕ್ಲೇ ಮಾಡ್ಲಿಂಗ್, ಜಲವರ್ಣ ಚಿತ್ರಕಲೆ, ಕೊಲಾಜ್, ಗ್ಲಾಸ್ ಪೇಂಟಿಂಗ್, ವಸ್ತು ಚಿತ್ರಣ, ಪ್ರಕೃತಿ ಹಾಗೂ ಆರ್ಟ್ ವರ್ಲಿ, ಮಡಿಕೆಗೆ ಬಣ್ಣ ಬಳಿಯುವುದು ಮತ್ತು ಅನ್ವಯಿಕ ಕಲೆಯ ದೃಶ್ಯ ಮಾಧ್ಯಮದ ಕುರಿತು ಜಿಲ್ಲೆಯ ನುರಿತ ಕಲಾವಿದರುಗಳಿಂದ ಶಿಕ್ಷಕರುಗಳಿಂದ ತರಬೇತಿಯನ್ನು ನೀಡಲಾಗುತ್ತದೆ. ಶಿಬಿರದಲ್ಲಿ ಹಿರಿಯ ಕಲಾವಿದರಾದಂತಹ ಗಣೇಶ ಸೋಮಯಾಜಿ ಜೊತೆಗೆ ಪ್ರತಿಭಾವಂತ ಕಲಾವಿದರಾದ ರಶ್ಮಿ ಆಚಾರ್ಯ, ಶ್ರೀಕಲ, ಸಾಯಿ ಪ್ರಣಿತ್, ವಸಂತ, ವಿವೇಕ ಹೀಗೆ ಹಲವಾರು ಕಲಾವಿದರು ಭಾಗವಹಿಸುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಕಲಾ ಶಿಕ್ಷಕರು ನಮ್ಮ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ.