13 ಏಪ್ರಿಲ್ 2023, ಕಾಸರಗೋಡು: ಬೆಂಗಳೂರಿನ ಜಾಗೃತಿ ಸೇವಾ ಟ್ರಸ್ಟ್ ಸೇವಾ ಸಂಸ್ಥೆ ಆಶ್ರಯದಲ್ಲಿ ಮತ್ತು ಎಡನೀರು ಮಠದ ಸಹಕಾರದಲ್ಲಿ ಏ.15ಕ್ಕೆ ಬೆಳಗ್ಗೆ 9.30ರಿಂದ ಎಡನೀರು ಮಠದಲ್ಲಿ ಕನ್ನಡ ಸಾಹಿತ್ಯ ಸಮಾವೇಶ, 2023ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಹಾಗೂ ಅಂತರ್ ರಾಜ್ಯ ಮಟ್ಟದ ಕವಿಗೋಷ್ಠಿ, ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.
ಬೆಳಗ್ಗೆ 9.30ರಿಂದ ವಿಶ್ವ ಮಾನವ ಸಂಗೀತ ಯಾನ ಕಾರ್ಯಕ್ರಮ ಜರಗಲಿದೆ. ನಂತರ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಗುರುರಾಜ್, ಸಮಾಜ ಸೇವಕಿ ಡಾ. ಭಾಗೀರಥಿ, ಡಿ.ಎಸ್.ಜ್ಯೋತಿ ರೆಡ್ಡಿ, ಮಮತಾ, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಮೈಕ್ರೋ ಬಯಾಲಜಿ ವಿಭಾಗದ ಡಾ.ಸಿ.ಎಲ್. ಶಿವಮೂರ್ತಿ ಭಾಗವಹಿಸಲಿದ್ದಾರೆ.
ಬಳಿಕ ಸಾಹಿತ್ಯ ಕಾರ್ಯಕ್ರಮ, ಕವಿಗೋಷ್ಠಿ ನಡೆಯಲಿದೆ. ಪತ್ರಕರ್ತ, ಸಂಘಟಕ ಶೇಖರ್ ಅಜೆಕಾರ್, ಯೋಗ ಶಿಕ್ಷಕರಾದ ನಾಗರತ್ನ, ಕಾರ್ತಿಕ್, ಸಮಾಜ ಸೇವಕ ನಾಗರಾಜ್, ಮಹೇಂದ್ರ ಮನೋತ ಉಪಸ್ಥಿತರಿರುವರು. ಬಳಿಕ ನಂತರ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಸಿಲ ಮಲ್ಲಿಗೆ ಮುಡುವು (ಗಮಕ ಗಾಯನ ಗಾರುಡಿಗ ಪ್ರಶಸ್ತಿ), ವೆಂಕಟ ಭಟ್ ಎಡನೀರು (ಕುಂಚ ಚಿತ್ರ ಬ್ರಹ್ಮ ಪ್ರಶಸ್ತಿ), ಡಾ. ವಾಣಿಶ್ರೀ ಕಾಸರಗೋಡು, ಶಾಂತಾ ಪುತ್ತೂರು (ಡಾ.ರಾಜ್ ಕುಮಾರ್ ಪ್ರಶಸ್ತಿ), ಮನೀಷ್ ಕುಲಾಲ್ (ಪುನೀತ್ ರಾಜ್ ಕುಮಾರ್ ಪ್ರಶಸ್ತಿ), ಪುಂಡಲೀಕ ಮೊಗವೀರ (ಪುನೀತ್ ರಾಜ್ ಕುಮಾರ್ ಸಮಾಜ ಸೇವಾ ಪ್ರಶಸ್ತಿ) ಅವರನ್ನು ಸನ್ಮಾನಿಸಲಾಗುವುದು ಎಂದು ಬೆಂಗಳೂರಿನ ಜಾಗೃತಿ ಸೇವಾ ಟ್ರಸ್ಟ್ ಸೇವಾ ಸಂಸ್ಥೆಯ ಬಿ. ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.