ಐರೋಡಿ : ಕೀರ್ತಿಶೇಷ ಭಾಗವತ ನೀಲಾವರ ಲಕ್ಷ್ಮೀನಾರಾಯಣ ರಾಯರ ಜನ್ಮ ಶತಮಾನೋತ್ಸವ 2025 ಸಂಕೀರ್ತನ 12 ತಿಂಗಳ ಸರಣಿ ಕಾರ್ಯಕ್ರಮಗಳ ಮಾಲಿಕೆಯಲ್ಲಿ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ‘ಯಕ್ಷಗಾನ ತಾಳಮದ್ದಳೆ’ಯು ದಿನಾಂಕ 29 ಜೂನ್ 2025ರಂದು ಸಂಜೆ 4-00 ಗಂಟೆಗೆ ಬಾಳ್ಕುದ್ರು ಶ್ರೀ ರಾಮ ಮಂದಿರದಲ್ಲಿ ನಡೆಯಲಿದೆ.
ಪಾರ್ತಿಸುಬ್ಬ ವಿರಚಿತ ‘ವಾಲಿ ವಧೆ’ ಪ್ರಸಂಗದ ಹಿಮ್ಮೇಳದಲ್ಲಿ ಉದಯ ಕುಮಾರ್ ಹೊಸಾಳ, ಶಶಿಕುಮಾರ್ ಆಚಾರ್ ಮತ್ತು ವಾಗ್ವಿಲಾಸ ಭಟ್ ಹಾಗೂ ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಜಬ್ಬಾರ್ ಸಮೊ ಸಂಪಾಜೆ, ರವಿರಾಜ ಪನೆಯಾಲ ಮತ್ತು ಸುನಿಲ್ ಹೊಲಾಡ್ ಸಹಕರಿಸಲಿದ್ದಾರೆ.