ಮೈಸೂರು : ಭಿನ್ನಷಡ್ಜ ಇದರ ವತಿಯಿಂದ ಹಲವು ಪ್ರಕಾರದ ಸಾಹಿತ್ಯ ಮತ್ತು ಸಂಗೀತದ ಅನುಸಂಧಾನ ‘ರಾಗ – ರಂಗ’ ರಂಗಸಂಗೀತ ತರಗತಿಗಳು ದಿನಾಂಕ 05 ಜುಲೈ 2025ರಿಂದ ಮೈಸೂರಿನಲ್ಲಿ ಆರಂಭವಾಗಲಿದೆ.
ಕನ್ನಡ ರಂಗಭೂಮಿಯಲ್ಲಿ ವೃತ್ತಿ ರಂಗಭೂಮಿಯಿಂದ ಇಂದಿನವರೆಗೆ ನಡೆದು ಬಂದ ರಂಗಸಂಗೀತವನ್ನು, ಹಲವಾರು ರೀತಿಯ ಸಾಹಿತ್ಯ ಮತ್ತು ಸಂಗೀತ ಪದ್ದತಿಗಳನ್ನು ಉದಾಹರಣೆ ಸಹಿತ ಕಲಿಸುವ ಪ್ರಕ್ರಿಯೆಯನ್ನು ಅರಂಭಿಸುತ್ತಿದ್ದೇವೆ. ರಂಗಭೂಮಿಗೆ ಬೇಕಾದ ಉಸಿರಾಟ, ಧ್ವನಿ ಮತ್ತು ದೇಹದ ನಡುವಿನ ಸಂಬಂಧ ಮತ್ತು ಸಾಮರಸ್ಯವನ್ನು ಅಭ್ಯಾಸಮಾಡುವ ಒಂದು ಅವಕಾಶ. 10 ವಯಸ್ಸಿನ ಮೇಲ್ಪಟ್ಟವರಿಗೆ ಸಂಗೀತದ ಪ್ರಾಥಮಿಕ ಪರಿಚಯವನ್ನು ಸುಲಭವಾಗಿ ಹಾಡುಗಳ ಮೂಲಕ ತಿಳಿಸಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9632535749 ಸಂಖ್ಯೆಯನ್ನು ಸಂಪರ್ಕಿಸಿರಿ.