ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 129ನೇ ಕಾರ್ಯಕ್ರಮ 14 ಜೂನ್ 2025 ರಂದು ಪುತ್ತೂರು ದರ್ಬೆ ಯ ಶಶಿಶಂಕರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಶಿಲ್ಪಾ ನಂಜಪ್ಪ ಇವರ ಕೊಡವ ಕಥೆಗಳ ಆಧಾರಿತ ವಿಶೇಷ ಭರತನಾಟ್ಯ ರೂಪಕ ‘ಟೇಲ್ಸ್ ಇನ್ ಕೊಡವ ‘ ಪ್ರಸ್ತುತಗೊಂಡು ಸಭಿಕರ ಮೆಚ್ಚುಗೆ ಪಡೆಯಿತು.
ಸಮಾರಂಭದಲ್ಲಿ ಅಭ್ಯಾಗತರಾದ ಯೇಳ್ತಿಮಾರ್ ವಿಜಯಲಕ್ಷ್ಮೀ ಶೆಣೈರವರು ಶಿಲ್ಪಾರವರ ಕಲಾಪ್ರಸ್ತುತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಕಾರ್ಯಕ್ರಮವನ್ನು ವಿದ್ವಾನ್ ದೀಪಕ್ ಕುಮಾರ್ ಆಯೋಜಿಸಿದ್ದರು. ಕಾರ್ಯಕ್ರಮದ ನಿರೂಪಣೆ ಕು. ಆದ್ಯ ಕೆ. , ಪ್ರಾರ್ಥನೆಯನ್ನು ವಿ. ಪ್ರೀತಿಕಲಾ, ಶಂಖನಾದವನ್ನು ಶೌರೀಕೃಷ್ಣ, ಪರಿಚಯವನ್ನು ಕು. ವಿಷ್ಣುಪ್ರಿಯ & ಆರಾಧ್ಯ ಕೆ. ಮತ್ತು ವಿಷಯ ಮಂಡನೆಯನ್ನು ಕು. ಆಪ್ತ ಚಂದ್ರಮತಿ ಮುಳಿಯ ಇವರು ನಿರ್ವಹಿಸಿದರು.