ಮೈಸೂರು : ‘ನಿರ್ದಿಗಂತ’ ಪ್ರಸ್ತುತ ಪಡಿಸುವ ಶಿವರಾಮ ಕಾರಂತರ ಕಾದಂಬರಿ ಆಧಾರಿತ ಅಮಿತ್ ಜೆ. ರೆಡ್ಡಿ ಇವರ ನಿರ್ದೇಶನದಲ್ಲಿ ‘ಮೈ ಮನಗಳ ಸುಳಿಯಲ್ಲಿ’ ನಾಟಕ ಪ್ರದರ್ಶನವನ್ನು ದಿನಾಂಕ 29 ಜೂನ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಆಯೋಜಿಸಲಾಗಿದೆ. ಅಕ್ಷತಾ ಕುಮಟಾ ಮತ್ತು ರಾಜೇಶ್ ಮಾಧವನ್ ರಂಗದ ಅಭಿನಯಿಸಲಿದ್ದು, ಅನುಶ್ ಎ. ಶೆಟ್ಟಿ ಸಂಗೀತ ವಿನ್ಯಾಸ, ಬಾಷಾಸಾಬ್ ಬೆಳಕಿನ ವಿನ್ಯಾಸ, ಶ್ವೇತಾರಾಣಿ ಹೆಚ್.ಕೆ. ವಸ್ತ್ರ ವಿನ್ಯಾಸ ಮಾಡಿರುತ್ತಾರೆ.