ಮೈಸೂರು : ನಟನ ರಂಗಶಾಲೆಯ ತಂಡ ಪ್ರಸ್ತುತ ಪಡಿಸುವ ಎ.ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್ (ಸಂಸ) ರಚಿಸಿರುವ ‘ವಿಗಡ ವಿಕ್ರಮರಾಯ’ ನಾಟಕ ಪ್ರದರ್ಶನವನ್ನು ದಿನಾಂಕ 06 ಜುಲೈ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ನಾಡು ಕಂಡ ಅತ್ಯಂತ ಶ್ರೇಷ್ಠ ನಾಟಕಕಾರರಲ್ಲಿ ಪ್ರಮುಖರೆನಿಸಿದ ‘ಸಂಸ’ರ ವಿಶಿಷ್ಟ ನಾಟಕವಿದು. ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿ ಕಂಡುಬಂದ ಘಟನಾವಳಿಗಳನ್ನು ಬಹು ಆಕರ್ಷಕ ಭಾಷೆಯಿಂದ ಅಪರೂಪದ ಸಂವಿಧಾನ ದೃಶ್ಯ ಕೌಶಲ್ಯ, ರೋಮಾಂಚಗೊಳಿಸುವ ನಾಟಕೀಯ ಗುಣಗಳಿಂದಾಗಿ ವೀಕ್ಷಕರ ವಿಮರ್ಶಕರ ಇಷ್ಟದ ನಾಟಕ.
ಈ ನಾಟಕಕ್ಕೆ ಚೇತನ್ ಸಿಂಗಾನಲ್ಲೂರು ಸಂಗೀತ, ದಿಶಾ ರಮೇಶ್ ಬೆಳಕು ಹಾಗೂ ಮೇಘ ಸಮೀರ ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.